Posts

Showing posts from 2012

ಅತಿ ಸಣ್ಣ ಕಥೆಗಳು

ಜೀವನ
ಒಂದು  ಮನೆಯಲ್ಲಿ ಮುಂಜಾನೆ ಬೇಗನೆ ಶ್ರಾದ್ಧ ನಡೆಸಿ , ಮತ್ತೊಂದು ಮನೆಯಲ್ಲಿ ಮಗುವಿನ ನಾಮಕರಣ ನಡೆಸಲು ಮೊಪೆಡ್ ನಲ್ಲಿ ಅವಸರವಸರದಲ್ಲಿ ಹೋಗುತ್ತಿದ್ದ ಪುರೋಹಿತರೊಬ್ಬರು ರಸ್ತೆ ಅಪಘಾತದಲ್ಲಿ ಮೃತರಾದರು. ಜೀವನದ ನಶ್ವರತೆ ಸಾಯುವ ಕೆಲವೇ ಕ್ಷಣಗಳ ಹಿಂದೆ ಅರಿವಾಗಿ ಅವರು ಮನದಲ್ಲೇ ನಕ್ಕರು. ಅವರ ಮಕ್ಕಳು ನಶ್ವರ ಜೀವನಗಳನ್ನು ಮುಂದುವರೆಸಿದರು.

ಬಲಿ
ಕೆಲ ವರ್ಷಗಳ ಹಿಂದೆ ದೀಪಾವಳಿಯ ಸಮಯದಲ್ಲಿ ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಲು ಪಾತಾಳದಿಂದೆದ್ದು  ಬಂದ. ರಸ್ತೆ, ಬೀದಿ, ಗಲ್ಲಿಗಳಲ್ಲೆಲ್ಲ ಜನ ಹುಚ್ಚೆದ್ದು ಪಟಾಕಿ ಸಿಡಿಸುತ್ತಿದ್ದರು. ಸದ್ದಿಗೆ ಹೆದರಿ ಪಾತಾಳಕ್ಕೆ ಹಿಂದಿರುಗಿದ ಬಲಿ ಮತ್ತೆಂದೂ ಭೂಮಿಯತ್ತ ತಲೆ ಹಾಕುವ ಸಾಹಸ ಮಾಡಲಿಲ್ಲ. ಪಟಾಕಿ ಸದ್ದಿಗೆ ಬಲಿ ಚಕ್ರವರ್ತಿ ಬಲಿಯಾದದ್ದು ತಿಳಿಯದ ಜನ ಪಟಾಕಿ ಸಿಡಿಸುವುದು ನಿಲ್ಲಿಸಲಿಲ್ಲ.

ಅಳು  
ಜಯಮ್ಮನವರು ತಾಯಿಯ ಶವದ ಮುಂದೆ ಅಳುತ್ತ ಕುಳಿತಿದ್ದರು. ಪಕ್ಕದಲ್ಲೆ ಮತ್ತೆ ಯಾರೋ ಬಿಕ್ಕಳಿಸುವ ದನಿ ಕೇಳಿ, ನೋಡಿದರೆ ಅವರ ಪತಿಯ ಅಣ್ಣನ ಮಗಳು, ಹೈ-ಸ್ಕೂಲು ಹುಡುಗಿ. ಜಯಮ್ಮ ತಮ್ಮ ಅಳು ಮರೆತರು, ಆ ಹುಡುಗಿಯ ತಾಯಿ ಸತ್ತದ್ದು ಹಿಂದಿನ ವರ್ಷವಷ್ಟೆ. ಅವಳ ಅಳು ಸದ್ಯಕ್ಕೆ ನಿಲ್ಲುವಂಥದ್ದಾಗಿರಲಿಲ್ಲ.
Barfi!

Image
Barfi is a good movie. It is a refreshing concept, and is worth a watch. It will stay in history as a great attempt. But what surprises me is this - with a good concept in hand, and with such talented lead and supporting actors, why did the movie feel content with just being good! Let me try listing what I didn't like about the movie:
There is nothing Chaplinesque about Barfi's character except for his histrionics. It is not a 'smiling through pain' character, though his first love "Shruthi" tells us so.
There is not enough substance in the first half.
The multiple flashbacks start intervening with the story-telling. I didn't understand why the flashbacks were required.
The second half seems dragged towards the end.
Film after film, Ranbir has been proving himself. I liked his performance. I think that alone can make Barfi a hit movie.

Capturing the mundane

Image

ನಿನಗೆ ಯಾವ ಗೋಲಿ ಬೇಕು?

ಆ ಹುಡುಗ ಬೆಳಗಿನಿಂದಲೂ ಅದೇ ಕೋಣೆಯಲ್ಲಿ ಕುಳಿತಿದ್ದ. ಆ ಕೋಣೆಯ ಮೂಲೆಯಲ್ಲಿ ಬಣ್ಣಬಣ್ಣದ ಗೋಲಿಗಳಿದ್ದವು. ಅವುಗಳನ್ನೇ ಬಹಳ ಹೊತ್ತು ನೋಡುತ್ತಾ ಕುಳಿತಿದ್ದ. ಹುಡುಗನ ತಾಯಿ ಈ ಮನೆಯಲ್ಲಿ ಕೆಲಸಕ್ಕಿದ್ದಳು. ಶಾಲೆಗೆ ರಜೆಯಾದ ಕಾರಣ, ಮಗನನ್ನೂ ಕರೆ ತಂದಿದ್ದಳು. ಪರರ ಮನೆಯಲ್ಲಿ ಐದಾರು ವರ್ಷ ವಯಸ್ಸಿನ ಮಕ್ಕಳಿಗಿರಬಹುದಾದ ಸಂಕೋಚದಲ್ಲಿ ಹುಡುಗ ಮೂಲೆಯಲ್ಲಿ ಕುಳಿತಿದ್ದ. ಶೋಕೇಸಿನಲ್ಲಿ ಅಲಂಕಾರಕ್ಕೆಂದು ತಂದಿದ್ದರೋ ಏನೋ, ಗೋಲಿಗಳನ್ನು ಯಾರೋ ಈ ಮೂಲೆಯಲ್ಲಿ ಸುರಿದಿದ್ದರು. ಹುಡುಗ ಗೋಲಿಗಳನ್ನು ಕುಕ್ಕರುಗಾಲಿನಲ್ಲಿ ಕುಳಿತು ನೋಡಿದ. ಕೆಲವನ್ನು ಎತ್ತಿ ಬೆಳಕಿಗೆ ಹಿಡಿದು, ತಿರುಗಿಸಿ ಸಂತೋಷ ಪಟ್ಟ. ಯಾರದಾದರೂ ಹೆಜ್ಜೆ ಸಪ್ಪಳ ಕೇಳಿದಾಗ ಪಟ್ಟನೆ ಕೆಳಗಿಟ್ಟು, ತನಗೂ ಗೋಲಿಗಳಿಗೂ ಸಂಬಂಧವಿಲ್ಲದಂತೆ ನಟಿಸುತ್ತ ಕುಳಿತ. ತಾಯಿ ಗಂಟೆಗೊಮ್ಮೆ ಬಂದು ಮಗ ತಂಟೆ ಮಾಡದೆ ಕುಳಿತಿರುವುದನ್ನು ಖಚಿತಪಡಿಸಿಕೊಂಡು ಮುಗುಳ್ನಕ್ಕು ಕೆಲಸಕ್ಕೆ ಮರಳುತ್ತಿದ್ದಳು. ಮನೆಯೊಡತಿ, 'ಎಂಥ ಪಾಪದ ಹುಡುಗ' ಎಂದುಕೊಂಡಳು ಹಲವು ಬಾರಿ. ಹುಡುಗ ಗೋಲಿಗಳನ್ನೇ ನೋಡುತ್ತಾ ಕುಳಿತ. ಒಂದೊಂದನ್ನೇ ಎತ್ತಿ ಬೆಳಕಿಗೊಡ್ಡಿ, ತಿರುಗಿಸಿ ಅದರೊಳಗಿದ್ದ ವಿಚಿತ್ರ ಆಕಾರಗಳು ಏನಿರಬಹುದೆಂದು ಯೋಚಿಸುತ್ತಾ ಕುಳಿತ. ತಿರುಗಿಸುತ್ತಾ ತಿರುಗಿಸುತ್ತಾ ಗೋಲಿಯೊಳಗೆ ಏನೇನೋ ಕಂಡಂತಾಗಿ ಸಂಭ್ರಮಿಸಿದ. ಪ್ರತಿಯೊಂದು ಗೋಲಿಯನ್ನೂ ಅದೇ ಬೆರಗಿನಿಂದ ಪರೀಕ್ಷಿಸಿದ. ತನ್ನ ಈ ಆಟ ಯಾರಿಗೂ ಗೊತ್ತಾಗಬಾ…

ಆಶ್ರಮದ ಹಾವುಗಳು

ಹಿಂದೊಂದು ಕಾಲದಲ್ಲಿ ಆಶ್ರಮವೊಂದಿತ್ತು. ಆಶ್ರಮದ ತುಂಬೆಲ್ಲ ಗಡ್ಡ ಬಿಟ್ಟುಕೊಂಡ ಸನ್ಯಾಸಿಗಳೇ ತುಂಬಿದ್ದರು. ಹೊರಗಿನಿಂದ ನೋಡುವವರಿಗೆ ಆಶ್ರಮ ಸುಂದರವಾಗಿಯೇ ಕಾಣುತ್ತಿತ್ತು. ಆಶ್ರಮವಾಸಿಗಳು ಒಬ್ಬರಲ್ಲೊಬ್ಬರು ಮಾತನಾಡುತ್ತಿರಲಿಲ್ಲ. ಎಲ್ಲರೂ ಯಂತ್ರಗಳಂತಿದ್ದರು. ಪ್ರತಿಯೊಬ್ಬರೂ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಅಲ್ಲಿ ಎದುರಿಸುವ ಮತ್ತು ಅನುಸರಿಸುವ ಪ್ರಶ್ನೆಯೇ ಇರಲಿಲ್ಲ. ಒಬ್ಬರ ಪರಿಧಿ ಇನ್ನೊಬ್ಬರ ಪರಿಧಿಯೊಂದಿಗೆ ಘರ್ಷಣೆಗೊಳಗಾಗುವ ಸಂಭವವೇ ಇರಲಿಲ್ಲ. ಎಲ್ಲರೂ ಶಾಂತ, ಮೌನ ತಪಸ್ವಿಗಳಾಗಿದ್ದರು. ಬಿಡುವಿನ ವೇಳೆಯಲ್ಲಿ ತಮ್ಮ ಮನಸ್ಸಿಗೆ ಬಂದ ಸ್ಥಳದಲ್ಲಿ ಕುಳಿತುಕೊಂಡು ಧ್ಯಾನಿಸುತ್ತಿದ್ದರು, ಜಪಿಸುತ್ತಿದ್ದರು.

ಆ ಆಶ್ರಮದ ಈಶಾನ್ಯ ಮೂಲೆಯಲ್ಲಿ ಆಲದ ಮರವೊಂದಿತ್ತು. ಆ ಮರದ ಕೆಳಗೆ ಎಷ್ಟೋ ವರ್ಷಗಳಿಂದ ನಾಶವಾಗದೇ ಉಳಿದ ಹಂಡೆಯೊಂದಿತ್ತು. ಅದರಲ್ಲಿ ಮಾಯೆಯಿಂದಲೋ ಎಂಬಂತೆ ಸದಾಕಾಲ ನೀರು ತುಂಬಿರುತ್ತಿತ್ತು. ಆ ನೀರಿನ ಸ್ಥಿತಿಯನ್ನು ಯಾರೂ ಕೆಣಕಲು ಹೋಗಿರಲಿಲ್ಲ. ಪ್ರಶ್ನಿಸುವ ಮನೋಭಾವವೇ ಇಲ್ಲದ ಆಶ್ರಮವಾಸಿಗಳು ಇದರ ಕುರಿತು ತಲೆ ಕೆಡಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಆಶ್ರಮವಾಸಿಗಳು ಇದ್ದದ್ದನ್ನು ಇದ್ದಂತೆ ಒಪ್ಪಿಕೊಳ್ಳುತ್ತಿದ್ದರು. ಅದು ಏಕೆ ಹಾಗಾಗಬೇಕು, ಹೀಗೇಕಾಗಬಾರದು ಎಂದು ಪ್ರಶ್ನಿಸುವ ಸ್ವಭಾವ ಅವರದಲ್ಲ. ಪ್ರಶ್ನೆಗಳಿಂದ ಅಲೆಗಳು ಏರ್ಪಡುತ್ತವೆ, ಅಲೆಗಳು ಸರ್ವನಾಶಕ್ಕೆ ಕಾರಣವಾಗುತ್ತವೆ - ಎಂಬುದು ಅವರು …

ಈ ಕಾಲ

ನಾವು ನೀವು ಬದುಕುತ್ತಿರುವ ಈ ಕಾಲದಲ್ಲಿ ಯಾವುದಕ್ಕೂ ಬೆಲೆ ಉಳಿದಿಲ್ಲ. ಸತ್ಯ, ನ್ಯಾಯ, ನೀತಿ, ಸಿದ್ಧಾಂತ ಎಂಬುದೆಲ್ಲ ಹಳಸಿದ ಮಾತು. ಹಿಂದೆಲ್ಲ ಚೆನ್ನಾಗಿತ್ತು ಎಂಬುದು ನನ್ನ ಅಭಿಪ್ರಾಯವಲ್ಲ , ಆದರೆ ಇಂದು "ಇದೆಲ್ಲ ಸರಿಯಿಲ್ಲ " ಎಂಬ ಮಾತಿಗೂ ಬೆಲೆ ಇಲ್ಲದಂತಾಗಿದೆ . ಪವಿತ್ರವಾಗಿ , ಪ್ರಶ್ನಾತೀತವಾಗಿ ಯಾವುದೂ ಉಳಿದಿಲ್ಲ.  ದೇವರು ಎಂಬ  ಕಲ್ಪನೆ ಎಷ್ಟು ಮನಗಳಲ್ಲಿ  ಉಳಿದಿದೆಯೋ ಆ ದೇವರೇ  ಬಲ್ಲ! ಆ ದೇವರ  ಹೆಸರಿನಲ್ಲಿ ಎಷ್ಟು ಅವ್ಯವಹಾರಗಳು ನಡೆದಿವೆಯೋ ಅದನ್ನೂ ಅವನೇ ಬಲ್ಲ! ಧರ್ಮವೆಂಬುದು ರಾಜಕೀಯ ದಾಳವಾದದ್ದು ಕೂಡ ಹಳೆಯ ಮಾತು. ಐ.ಎ.ಎಸ್. ಅಧಿಕಾರಿ, ವಕೀಲ, ಸರಕಾರಿ ಉದ್ಯೋಗಿ, ನ್ಯಾಯಾಧೀಶ, ಕೊನೆಗೆ ರಾಷ್ಟ್ರಪತಿಯಂಥ ರಾಷ್ಟ್ರಪತಿ ಕೂಡ ಘನತೆಯನ್ನು ಉಳಿಸಿಕೊಂಡಿಲ್ಲ. ರಾಜಕಾರಣಿ ಮರ್ಯಾದೆ ಕಳೆದುಕೊಂಡು ದಶಕಗಳೇ ಕಳೆದವು. ಇಂಥ ಈ ಕಾಲದಲ್ಲಿ ಯಾರಿಗೂ ಮತ್ತೊಬ್ಬರಿಗೆ ಬುದ್ಧಿ ಹೇಳುವ, ತಿದ್ದುವ ಅರ್ಹತೆ ಇಲ್ಲ. ಎಲ್ಲರೂ ಅವರವರ ಸ್ವಾರ್ಥ ಸಾಧಿಸಿಕೊಳ್ಳುವುದೇ ಸರಿ ಎಂದು ಬದುಕುತ್ತಿದ್ದಾರೆ.

ಸಮಾಜದ ಕಥೆ ಹೀಗಾದರೆ ಖಾಸಗಿ ಜೀವನದ್ದು ಇನ್ನೊಂದು ಕಥೆ. ಸಂಬಂಧಗಳಿಗೆ ಬೆಲೆ ಇಲ್ಲ. ತಂದೆಯ ಮಮತೆ, ತಾಯಿಯ ಪ್ರೀತಿ ಪ್ರಶ್ನಾತೀತವಾದದ್ದು ಎಂದುಕೊಂಡವರು ಎಷ್ಟು ಜನ ಉಳಿದಿದ್ದಾರೋ ಗೊತ್ತಿಲ್ಲ. ಪ್ರೇಮ ಪವಿತ್ರವಾಗಿ ಕಾಣುವುದು ತೀರ ಭಾವುಕವಾಗಿದ್ದಾಗ ಮಾತ್ರ. ನಂತರ ಅದೂ ಕೂಡ ಬೇರೆ ಭಾವಗಳಂತೆ ಮಾಮೂಲಿಯಾಗಿ ಕಾಣತೊಡಗುತ್ತದೆ. ಸ್ವಾರ…

Nothing

Image
The other day, the siren at the Electronic City Phase 2 traffic signal was beeping continuously. Normally, this siren is to indicate that the pedestrians can cross the road. However, this time it was due to a malfunctioning of the system. The beep was still going on when I left that place. The traffic signal displayed the green light for pedestrians, as the vehicles were speeding their way on the road. As everyone knows, these signals are to be followed at one's own risk.

It was good fun to see the traffic police trying to stop the beep. One guy climbed on to the post and tried his skills. Nothing stopped the beep. But the fact is that nobody took the beep seriously. None of the pedestrians relied on the signal while crossing the road there. Needless to say, none of the vehicles cared to slow down looking at the signal.The Electronic city signal provides an option to the pedestrian to turn signal in his favor while crossing the road. He can push a button which will turn green si…

ವ್ಯರ್ಥ ಹಣ ಕಳೆದದ್ದು

ಈಗ ಒಂದು ವರ್ಷದಿಂದ ವ್ಯರ್ಥ ಹಣ ಕಳೆದದ್ದು ಈ ಕೆಳಗಿನ ಸಿನಿಮಾಗಳಿಗೆ :
ಅಣ್ಣಾ ಬಾಂಡ್ಗೋವಿಂದಾಯ ನಮಃ ಭೀಮಾ ತೀರದಲ್ಲಿ ಬ್ರೇಕಿಂಗ್ ನ್ಯೂಸ್ ಪರಮಾತ್ಮ ಜೋಗಯ್ಯShanghai (ಹಿಂದಿ)Madagascar 3 (ಆಂಗ್ಲ)ವೇಟೈ (ತಮಿಳು)ಮಂಕಾತ್ತ (ತಮಿಳು) ಇಷ್ಟ ಪಟ್ಟು ನೋಡಿದ್ದು -
 ವಿಷ್ಣುವರ್ಧನVicky Donor (ಹಿಂದಿ)