Posts

Showing posts from 2014

Facebook Ramblings - Dec 2014

Image
Dec 28, 2014:

The year looked normal and uninteresting; but when Facebook told me how great it was, WOW!
— feeling blah.

 Dec 21, 2014:


ನಿನ್ನೆಯಿಂದ ಪೀಕೆ ಸಿನಿಮಾದ ಬಗ್ಗೆ ಫೇಸ್ಬುಕ್ಕಿನಲ್ಲಿ ಕೇಳಿ ಬರುತ್ತಿರುವ ವಿವಿಧ ತಪ್ಪು ಅಭಿಪ್ರಾಯಗಳು :
೧. ಇದು ಹಿಂದೂ ಧರ್ಮ ವಿರೋಧಿ ಸಿನಿಮಾ: ಪೀಕೆ ಮನರಂಜನೆಗೋಸ್ಕರ ಮಾಡಿರುವ ಸಿನಿಮಾ. ಮನರಂಜನೆ ನೀಡುತ್ತಲೇ ಮನುಷ್ಯ ಕಟ್ಟಿರುವ ದೇವರ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತದೆ. ಆ ಪ್ರಶ್ನೆಗಳು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತವೆ. ಸಿನಿಮಾವನ್ನು ವಿಮರ್ಶೆ ಮಾಡುವ ಬದಲು ಅದರ ನಾಯಕನಟನ ಧರ್ಮವನ್ನು ವಿಮರ್ಶೆ ಮಾಡಹೊರಟರೆ ಇಂಥ ಅಭಿಪ್ರಾಯ ಬರುತ್ತದೆ.
೨. ಪೀಕೆಯಲ್ಲಿ ಹೊಸತೇನೂ ಇಲ್ಲ. ಇದೆಲ್ಲ ನನಗೆ ಮೊದಲೇ ಗೊತ್ತಿತ್ತು: ಒಂದಿಷ್ಟು ಪುಸ್ತಕಗಳನ್ನು ಗಂಭೀರವಾಗಿ ಓದಿದವರಿಗೆ ಸಾಮಾನ್ಯರಿಗೆ ...ತಿಳಿದಿರದ ಎಷ್ಟೋ ವಿಷಯಗಳು ತಿಳಿದಿರುತ್ತದೆ. ಆದರೆ ಆ ಬುದ್ಧಿವಂತಿಕೆಯ ಅಹಂ ಇಟ್ಟುಕೊಂಡು ನೋಡಿದರೆ ಯಾವ ವಿಷಯವೂ ಹೊಸದಾಗಿ ಕಾಣುವುದಿಲ್ಲ. ಎಲ್ಲ ಸಿನಿಮಾಗಳೂ ನಮ್ಮ ಬುದ್ಧಿವಂತಿಕೆಗೆ ಸವಾಲಾಗಿಯೇ ಇರಬೇಕು ಎಂದೇನಿಲ್ಲ. ಇದುವರೆಗೆ ಕೆಲವು ವಿಚಾರವಾದಿಗಳ ಮಾತುಗಳಲ್ಲಿ, ಪುಸ್ತಕಗಳಲ್ಲಿ,ಹಾಗೂ ಕೆಲವರ ಮನಗಳಲ್ಲಿ ಕುಳಿತಿದ್ದ ವಿಚಾರಗಳು ಬಾಲಿವುಡ್ ನಂಥ ಪ್ರಬಲ ಮಾಧ್ಯಮದ ಮೂಲಕ ಮತ್ತಷ್ಟು ಜನರನ್ನು ತಲುಪುವುದಾದರೆ ತಪ್ಪೇನು? 'ಪ್ರೇಮ ಅಮರ' ಎನ್ನುತ್ತ …

FaceBook Ramblings - Nov 2014

Nov 20, 2014:

ಎಫ್.ಎಮ್. ನಲ್ಲಿ ಹಾಡು ಕೇಳುತ್ತಾ ಗಾಡಿ ಓಡಿಸುತ್ತಿದ್ದ ಅವನ ಟೈರ್ ಒಮ್ಮೆ ಜೋರಾಗಿ 'ಢಮ್' ಎಂದು ಸದ್ದು ಹೊರಡಿಸಿ ಗಾಳಿ ಕಳೆದುಕೊಂಡಿತು. ಇನ್ನೇನು ಹಿಡಿತ ತಪ್ಪಿ ಬೀಳಲಿದ್ದವನು ಸಂಭಾಳಿಸಿಕೊಂಡು ಗಾಡಿಯನ್ನು ರಸ್ತೆಯ ಬದಿಗೆ ತರುವಲ್ಲಿ ಯಶಸ್ವಿಯಾದ. ಗಾಡಿಯನ್ನು ತಳ್ಳಿಕೊಂಡು ಹೊರಟ. ಬಿಸಿಲು ಜೋರಿತ್ತು. ಬೆವರಿಳಿಸಿಕೊಂಡು, ಏದುಸಿರು ಬಿಡುತ್ತಾ ಅಸಹಾಯಕ ಸಿಟ್ಟಿನಲ್ಲಿ ಪ್ರಪಂಚಕ್ಕೆಲ್ಲ ಬಯ್ಯುತ್ತಿದ್ದವನ ಕಣ್ಣಿಗೆ ಆ ಬೋರ್ಡು ಬಿದ್ದಾಗ ಅವನ ಬಾಯಲ್ಲಿ ಬಂದ ಹಾಡು - 'ಅರರರೇ ಪಂಚರ್ ಅಂಗ್ಡಿ!!!'. ಎಫ್.ಎಮ್. ನಲ್ಲಿ ಬರುತ್ತಿದ್ದ ಹಾಡು -'ಅರರರೇ ಪಂಚರಂಗಿ!'

Nov 18, 2014:

ಒಂದು ಮಕ್ಕಳ ಕಥೆ:
ಒಂದು ಊರಿನಲ್ಲಿ ಒಬ್ಬ ಸಜ್ಜನ ವ್ಯಾಪಾರಿಯಿದ್ದ. ಅವನು ದೈವಭಕ್ತ, ನ್ಯಾಯಕ್ಕೆ ಹೆದರುತ್ತಿದ್ದ. ಊರ ಜನರೂ ಕೂಡ ಇವನನ್ನು ಬಹಳ ಮೆಚ್ಚುತ್ತಿದ್ದರು.
ಅದೇ ಊರಿನಲ್ಲಿ ಒಬ್ಬ ದುಷ್ಟ ವ್ಯಾಪಾರಿಯಿದ್ದ. ಅವನು ದೇವರನ್ನು ನಂಬುತ್ತಿರಲಿಲ್ಲ. ಅವನು ಬಹಳ ಅನ್ಯಾಯ ಮಾಡುತ್ತಿದ್ದ.
...
ಕಾಲ ಕಳೆದಂತೆ ಸಜ್ಜನ ವ್ಯಾಪಾರಿಯ ವ್ಯವಹಾರ ಉನ್ನತಿ ಹೊಂದುತ್ತಾ ಹೋಯಿತು. ದುಷ್ಟ ವ್ಯಾಪಾರಿಯ ಮೋಸ, ವಂಚನೆ ಅವನನ್ನೇ ಬಲಿ ತೆಗೆದುಕೊಂಡಿತು.
ನೀತಿ: ನ್ಯಾಯಕ್ಕೇ ಜಯ.... ಹೀಗೆಲ್ಲಾ ಹೇಳ್ತಾ ಹೋದ್ರೆ ಇವತ್ತಿನ ಮಕ್ಕಳು ನಂಬೊಲ್ಲ ಬಿಡಿ. ದೊಡ್ಡವರಂತೂ ಪಕಪಕನೆ ನಗುವುದು ಖಂಡಿತ. ಹಾಗಿದ್ರೆ ನೀತಿ ಏನು? ಯಾವೋನಿಗೊ…

FaceBook Ramblings - Oct 2014

Oct 24, 2014:

ಅಪ್ಪ ಪಟಾಕಿ ಕೊಡಿಸ್ತಿರಲಿಲ್ಲ. 'ಎಟುಕದ ದ್ರಾಕ್ಷಿ ಹುಳಿ' ಅನ್ನಿಸಿರಬಹುದು, ಮತ್ತು ಅನಿಸಿದ್ದನ್ನೆಲ್ಲ 'ಚುಟುಕ'ದಲ್ಲಿ ಹೇಳುವ ಹುಚ್ಚು. ಹೈಸ್ಕೂಲಿನಲ್ಲಿದ್ದಾಗ ಬರೆದದ್ದು, ದೀಪಾವಳಿಯ ಸಮಯದಲ್ಲಿ:
ಹಬ್ಬದಂದು ಪಟಾಕಿ ಏಕೆ?
ಸಂತಸವ ಸದ್ದಿನೊಂದಿಗೆ ಆಚರಿಸಬೇಕೆ!
ವೃಥಾ ಮಾಲಿನ್ಯವ ಸೃಷ್ಟಿಸಲೇಕೆ?...
ಮುಂದೊಮ್ಮೆ ಮರುಗಬೇಕಾದೀತು, ಜೋಕೆ!
Oct 16, 2014: ಬಂಧೀಖಾನೆ....
ನಾನೊಬ್ಬ ಖೈದಿ,
ಸಿದ್ಧಾಂತಗಳೆಲ್ಲ ಸರಪಳಿಗಳು
ನಾ ಬಂಧಿ ವಿಚಾರಗಳ ಬಂಧೀಖಾನೆಯಲ್ಲಿ....
...
ನನ್ನ ಗೆಳೆಯ ಕೂಡ ಖೈದಿ,
ರೂಪಾಯಿಯ ಸರಪಳಿಯಲ್ಲಿ
ಅವ ಬಂಧಿ ಅವನ ಕಾರು, ಅವನದೇ ಅಪಾರ್ಟ್ಮೆಂಟುಗಳಲ್ಲಿ
ನನ್ನ ಬಾಸ್ ನ ಕಥೆ ಬೇರೆ,
ಅವ ನಿಜಕ್ಕೂ ಸ್ವತಂತ್ರ
ಅದು ತಿಳಿಯದ ಅವನೂ ಕೂಡ ಬಂಧಿ,
ಅವನದೇ ಮೌಢ್ಯದಲ್ಲಿ!
ನೆರೆಮನೆಯವ ಸಿನಿಕ
ಅಲ್ಲದೇ ಮಹಾ ಮೌನಿ
ಅವನೂ ಕೂಡ ಖೈದಿ
ಅವನದೇ ಮೌನದಲ್ಲಿ...
ಅವನ ಪತ್ನಿ ಬಾಯಿಬಡುಕಿ
ಜೊತೆಗೆ ಟೆಲಿವಿಷನ್ ಶೋಕಿ
ವಿಚಾರಗಳೆಲ್ಲ ಚೌಕಾಕಾರ
ಅವಳು ಎಂದೆಂದಿಗೂ ಬಂಧಿ
ನಲವತ್ತೆರಡಿಂಚಿನ ಪೆಟ್ಟಿಗೆಯಲ್ಲಿ!
ನಾವೆಲ್ಲ ಖೈದಿಗಳು
ನಮ್ಮ ನಂಬಿಕೆಗಳಲ್ಲಿ,
ಭಕ್ತಿಯಲ್ಲಿ, ಪ್ರೇಮದಲ್ಲಿ
ಮಮತೆಯಲ್ಲಿ, ಮಾತ್ಸರ್ಯದಲ್ಲಿ...
ನಾವು ಕಟ್ಟಿದ ದೇವರು ಕೂಡ ಖೈದಿ
ಅವನು ಎಂದೆಂದಿಗೂ ಬಂಧಿ,
ನಾವು ಹೊರಿಸಿದ ಶಕ್ತಿಯ ಭಾರದಲ್ಲಿ,
ಕಲ್ಪಿತ ಕಥೆಗಳ ಪರಿಮಿತ ಸತ್ಯಗಳಲ್ಲಿ,
ಬದಲೇ ಆಗದ ಧರ್ಮ ಗ್ರಂಥಗಳ ವ್ಯಾಖ್ಯಾನದಲ್ಲಿ....
ಇಷ್ಟ…

FaceBook Ramblings - Sep 2014

Sep 29, 2014:

Banners welcoming Amma, on Hosur road. What did they mean; welcome to Parappana Agrahara?

Sep 19, 2014:

When life becomes just about the house you own, the car you drive, the restaurants you dine in, and the money you earn... You know you have stopped living.

Sep 17, 2014:

ನೈಸ್ ರೋಡ್ ನ ಬದಿಯಲ್ಲಿ ಬೆಳೆದ ಹುಲ್ಲನ್ನು ಕತ್ತರಿಸಿ 'ಸಮ' ಮಾಡುವವರನ್ನು ಕಂಡಾಗ ಅನಿಸಿದ್ದು - ಮನುಷ್ಯ ಯಾವುದನ್ನೂ ಅದರ ಪಾಡಿಗೆ ಬಿಡಲೊಲ್ಲ. ಎಲ್ಲವನ್ನೂ ಕತ್ತರಿಸಿ ಮಟ್ಟಸ ಮಾಡಬೇಕು, ಎಲ್ಲವೂ ತನ್ನ ಹಿಡಿತದಲ್ಲಿರಬೇಕು. ಎಲ್ಲವೂ ವ್ಯವಸ್ಥೆಯ ಬಂಧನದಲ್ಲಿರಬೇಕು. ಯಾವನಾದರೂ ಸ್ವತಂತ್ರನಾಗಿರಲು ಯತ್ನಿಸುತ್ತಿದ್ದಾನೆಯೇ? ಬಿಡಬೇಡ, ಕಡಿದು ಮಟ್ಟಸ ಮಾಡು!FaceBook Ramblings - Jul 2014

Jul 30, 2014:

Preethi-geethi, maduve-giduve, college - geelej, thindi-gindi, jagaLa-gigaLa... 'gi'kaarave yake?

Jul 17, 2014:

ಮನುಷ್ಯ ಮನುಷ್ಯನಿಗೆ ಅರ್ಥವಾಗದ ಕಾರಣಕ್ಕಾಗಿ ದೇವರನ್ನು ಸೃಷ್ಟಿಸಿದನೇ?

FaceBook Ramblings - Jun 2014

Jun 22, 2014:

ಟಿಪಿಕಲ್ ಕೈಲಾಸ್ : ಸಹಜ ಹಾಸ್ಯದ ಉತ್ತಮ ಚಿತ್ರ. ಸೃಜನ್ ಲೋಕೇಶ್ ನಗಿಸುವುದು ತುಂಬ ಸುಲಭವೇನೋ ಎಂದೆನಿಸುವಂತೆ ನಟಿಸಿದ್ದಾರೆ. ಹಾಸ್ಯಕ್ಕಾಗಿ ಹಾಸ್ಯ ಸೃಷ್ಟಿಸದೆ, ಒಂದು ಸರಳ ಕಥೆ ಹೇಳುತ್ತ, ಆ ಕಥೆಯಲ್ಲಿ ಹಾಸ್ಯವನ್ನು ಬೆರೆಸಿರುವ ನಿರ್ದೇಶಕರ ಶೈಲಿ ಇಷ್ಟವಾಗುತ್ತದೆ.
Watch it for a good laugh.

Jun 19, 2014:

ದೇವರು ಇದ್ದಾನೆಯೇ ಇಲ್ಲವೇ ಎಂದು ಕೇಳಿದರೆ ಇದ್ದಾನೆ ಅಥವ ಇಲ್ಲ ಎಂದು ಖಚಿತವಾಗಿ ಉತ್ತರಿಸುವವರೆ ಹೆಚ್ಚು. ಈ ಪ್ರಶ್ನೆಗೆ 'ಗೊತ್ತಿಲ್ಲ ', ಎಂದು ಮುಗ್ಧವಾಗಿ ಉತ್ತರಿಸುವುದು ಸಾಧ್ಯವಿಲ್ಲವೆ? 'ನಾನು' ಎಂದರೆ ಏನು ಎಂಬುದನ್ನು ಅರಿಯುವುದೇ ಅಸಾಧ್ಯವಾಗಿರುವಾಗ, ದೇವರು ಇಲ್ಲ ಎಂದು ಸಾಧಿಸಿ ತೋರಿಸಲು ಸಾಧ್ಯವೆ? ಅಥವ ದೇವರು ಇದ್ದಾನೆ ಎನ್ನುವುದಾದಲ್ಲಿ ಅವನನ್ನು ಪಡೆಯಲು ಸಾಧ್ಯವೆ!? ಮನುಷ್ಯತ್ವವನ್ನು ಉಳಿಸಿಕೊಳ್ಳಲೇ ಹೆಣಗಬೇಕಾಗಿ ಬಂದಿರುವಾಗ, ದೈವತ್ವದ ಅನ್ವೇಷಣೆ ಅವಶ್ಯವೆ?

Jun 3, 2014:

ಬದುಕು ಮುಖ್ಯವೆ, ಬದುಕಿನ ಕುರಿತಾದ ಪ್ರಶ್ನೆಗಳು ಮುಖ್ಯವೆ? ಬದುಕಿನ ಹಿಂದೆ ಹೋದವರು ಪ್ರಶ್ನೆಗಳನ್ನು ಮರೆಯುತ್ತಾರೆ, ಪ್ರಶ್ನೆಗಳ ಹಿಂದೆ ಹೋಗುವವರು ಬದುಕುವುದನ್ನು ಮರೆಯುತ್ತಾರೆ. ಎರಡನ್ನೂ ಸಮನಾಗಿ ತೂಗಿಸಿಕೊಂಡು ಹೋಗುತ್ತೇನೆ ಎನ್ನುವವರು ಎರಡಕ್ಕೂ ನ್ಯಾಯ ಒದಗಿಸುವುದಿಲ್ಲ.
ಬದುಕು ಮುಖ್ಯವೆ, ಬದುಕಿನ ಕುರಿತಾದ ಪ್ರಶ್ನೆಗಳು ಮುಖ್ಯವೆ?ವಿಶ್ವ ಮಹಿಳಾ ದಿನ

ಬ್ಯಾಂಗಳೂರ್ ವೇವ್ಸ್ ಎಂಬ ವೆಬ್ ಸೈಟ್ ನಲ್ಲಿ ಪ್ರಕಟವಾದ ವಿಶ್ವ ಮಹಿಳಾ ದಿನದ ಕುರಿತಾದ ನನ್ನ ಲೇಖನ :

http://www.bangalorewaves.com/articles/bangalorewaves-article-details.php?val1=NjI5


ಹ್ಯಾಪಿ ಬರ್ತ್ ಡೇ

ಪುಷ್ಪ ವಿವೇಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯಾದ ಎರಡು ತಿಂಗಳಿಗೇ ಬೇರೆ ಮನೆ ಮಾಡಿ ಸಂಸಾರ ಹೂಡಿದ್ದರು. ವಿವೇಕನಿಗೆ ಐದು ಅಣ್ಣಂದಿರಿದ್ದರು, ಹಾಗೂ ಆರು ಅಕ್ಕಂದಿರು. ಅಕ್ಕಂದಿರೆಲ್ಲರ ಮದುವೆಗಳಾಗಿ ಗಂಡಂದಿರ ಮನೆಗಳನ್ನು ಸೇರಿಕೊಂಡಿದ್ದರಾದರೂ, ಅಣ್ಣಂದಿರು ಮದುವೆಗಳಾದ ಮೇಲೂ ಜೊತೆಗೇ ಇದ್ದರು. ವಿವೇಕ-ಪುಷ್ಪ ಬಂಡಾಯವೆದ್ದು ಬೇರೆ ಮನೆ ಮಾಡಿದ್ದರು. ತಾವೇನೋ ಕ್ರಾಂತಿ ನಡೆಸಿದ್ದೇವೆಂಬ ಭಾವವಿತ್ತು ಇಬ್ಬರಲ್ಲೂ ಈ ವಿಷಯದಲ್ಲಿ. ಮುಂದೆ ಪುಷ್ಪ ಗಂಡು ಮಗುವೊಂದನ್ನು ಹೆತ್ತಳು.  ಹುಟ್ಟುತ್ತಲೇ ನಿತ್ರಾಣವಾಗಿತ್ತು; ಹೆಚ್ಚು ತೂಕವಿರಲಿಲ್ಲ. ವಿವೇಕನ ಅಣ್ಣಂದಿರ ಹೆಂಡತಿಯರು 'ದೊಡ್ಡವರ  ಕೇಳದ ಫಲ. ಮಾಗುವಿಗೆ ಆರೋಗ್ಯ ಸರಿಯಿಲ್ಲ.', ಎಂದು ಆಡಿ ತೋರಿಸಿದರು. ವಿವೇಕ ಕೆಮ್ಮಿ ಸುಮ್ಮನಾದರೆ ಪುಷ್ಪ ತಾನು ಮಗುವನ್ನು ಬೆಳೆಸಿ ಗೆಲ್ಲಿಸಿ ತೋರಿಸಬೇಕೆಂದು ಪಣ ತೊಟ್ಟಳು. ಮಗುವಿನ ಭವಿಷ್ಯದ ಬಗ್ಗೆ ಗಂಡನಲ್ಲಿ ತನ್ನ ಯೋಜನೆಗಳನ್ನು ಹಂಚಿಕೊಂಡಳು. ವಿವೇಕ ಪುಷ್ಪಳ ದುಬಾರಿ ಯೋಜನೆಗಳಿಗೆಲ್ಲ ಹಣ ಹೊಂದಿಸುವುದಾದರೂ ಹೇಗೆ ಎಂದು ಚಿಂತಿಸಲಾರಂಭಿಸಿದ. ತನಗೆ ಮುಂದೆ ಬಹಳ  ಕಷ್ಟಕರ ದಿನಗಳು ಎಂದು ತನ್ನ ಹಣೆಬರಹವನ್ನು ತಾನೇ ಹಳಿದುಕೊಂಡ.  ********************************************************************************************************** ಮಗುವಿನ ನಾಮಕರಣ ಸಮಾರಂಭ ಭರ್ಜರಿಯಾಗಿ ನಡೆಯಿತು. ವಿವೇಕನ ಸಾಲದ ಹೊರ…

ಸಾವು-ಬದುಕಿನ ಆಟ

(ಭಾಗ ೧)
ಶರ್ಮಿಳಾಳ ಬಗ್ಗೆ ನೆನೆದಾಗ ನಯನಾಳಿಗೆ ಮೊದಲು ನೆನಪಾಗುವುದು ಅವಳ ದೈವ ಭಕ್ತಿ. ಅದರಲ್ಲೂ ಶಿರಡಿಯ ಸಾಯಿ ಬಾಬಾರ ಬಗ್ಗೆ ಇದ್ದ ಅವಳ ವಿಪರೀತ ಭಕ್ತಿ. ಅವಳು ತನ್ನ ಈ-ಮೇಲ್ ಅಕೌಂಟಿಗಾಗಲಿ, ಕಂಪ್ಯೂಟರ್ ಗಾಗಲಿ ಇಡುತ್ತಿದ್ದ ಪಾಸ್ವರ್ಡ್ ಗಳು ಕೂಡ "LoveYouSairam", "sairam123" ಎಂದಿತ್ಯಾದಿಯಾಗಿ ಅವಳ ಸಾಯಿ-ಭಕ್ತಿ ಯನ್ನು ಪ್ರತಿಬಿಂಬಿಸುವಂತಿದ್ದವು. ಪ್ರತಿ ಗಳಿಗೆಯೂ ಅವಳು ಸಾಯಿ ಬಾಬರೊಂದಿಗೆ ಸಂವಾದ ನಡೆಸುತ್ತಿದ್ದಳು. ಅಗತ್ಯಕ್ಕಿಂತ ಹೆಚ್ಚಾಗಿ ಬಾಬಾರನ್ನು ನಂಬುತ್ತಿದ್ದ ಅವಳು ಭಕ್ತಿಯಿಂದ ಬೇಡಿದರೆ ಕಷ್ಟಗಳೆಲ್ಲವೂ ದೂರವಾಗುವುದೆಂದು ದೃಢವಾಗಿ ನಂಬಿಕೊಂಡಿದ್ದಳು. ಬದುಕಿನಲ್ಲಿ ಅವಳಿಗಿದ್ದ ಕಷ್ಟಗಳೆಂದರೆ ಅವಳ ಕುಟುಂಬದ ಜವಾಬ್ದಾರಿ ಮತ್ತು ಈ ಜವಾಬ್ದಾರಿಗಳ ನಡುವೆಯೂ ಬೇಕೆನಿಸಿದ್ದ ಪ್ರೇಮ. ಮಹೇಶ ಎಂಬ ಹೆಸರಿನ ಅವಳ ಪ್ರಿಯತಮ ಅವಳ ಕಷ್ಟಗಳನ್ನು ಕರಗಿಸುವ ನಾಯಕನಾಗಿರದೆ, ಅವಳ ಕಷ್ಟಗಳನ್ನು ಹೆಚ್ಚಿಸುವ ಖಳನಾಯಕನಾಗಿ ಬಿಟ್ಟಿದ್ದ. ಹುಚ್ಚು ಹುಡುಗಿ ಶರ್ಮಿಳಾ ಮಹೇಶ ಸಿಗದಿದ್ದರೆ ಬಾಳುವುದಿಲ್ಲ ಎಂದು ಹಟ ತೊಟ್ಟಿದ್ದಳು. ಮಹೇಶ ಹುಚ್ಚು ಕುದುರೆಯಂತೆ ಶರ್ಮಿಳಾಳ ಹೊರತಾಗಿಯೂ ಎರಡು ಮೂರು ಹುಡುಗಿಯರೊಂದಿಗೆ ಚೆಲ್ಲಾಟ ನಡೆಸಿದ್ದ. ಶರ್ಮಿಳಾ-ಮಹೇಶರ ಮದುವೆ ಯಾವತ್ತೂ ನಡೆಯುವುದಿಲ್ಲವೆಂದು ತಿಳಿದಿದ್ದೂ ಕೂಡ ನಯನಾ ಶರ್ಮಿಳಾಳ ಹುಚ್ಚು ಪ್ರಯತ್ನಗಳಲ್ಲಿ ಭಾಗಿಯಾಗುತ್ತಿದ್ದಳು.

"ಪ್ರತಿದಿನ ವೈನ್ ಕುಡಿದ್ರೆ…

FaceBook Ramblings - Jan - Apr 2014

Image
Apr 10, 2014:

Today all the cartoonists are busy making fun of AK, RaGa and Manmohan Singh. Will they be able to poke fun at Narendra Modi at least once he comes to power? Or will they continue to be biased?

Mar 31, 2014:

ಯುಗಾದಿಗೆ ಬೆಂಗಳೂರು ವೇವ್ಸ್ ನಲ್ಲಿ ಪ್ರಕಟವಾದ ಲೇಖನ :

http://www.bangalorewaves.com/articles/bangalorewaves-article-details.php?val1=NjY5

Mar 30, 2014:

ಉಳಿದವರು ಕಂಡಂತೆ - ವೀಕ್ಷಕರಿಗೆ ಏನಾದರೂ ಹೊಸತನ್ನು ಕೊಡಬೇಕೆಂಬ ತುಡಿತದ ಫಲ. ದೃಶ್ಯಗಳನ್ನು ಕಟ್ಟಿಕೊಡುವುದರಲ್ಲಾಗಲಿ, ತಾಂತ್ರಿಕತೆಯಲ್ಲಾಗಲಿ, ಹಿನ್ನೆಲೆ ಸಂಗೀತದಲ್ಲಾಗಲಿ - ಎಲ್ಲದರಲ್ಲು ಹೊಸತನವಿದೆ.
ಹೊಸತನ್ನು ಇಷ್ಟ ಪಡುವವರು, ಹೊಸ ಪ್ರಯತ್ನಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವವರು ಒಮ್ಮೆ ನೋಡಲೇಬೇಕಾದ ಸಿನಿಮಾ.

Mar 28, 2014:

ಟಿಕೆಟ್ ಬುಕ್ ಮಾಡಿಲ್ವ? ಯಾಕೆ, ಶೂಟ್ ಮಾಡ್ಬೇಕಾ? #UlidavaruKandanthe

Mar 16, 2014:

Few pending comments :
The Monuments Men - An interesting canvas. But a boring movie, most probably because of the lazy screenplay.
The Wolf of Wall Street - An interesting movie. A bit cruel and ruthless, but still worth watching.
...
Queen - A must watch. A very refresh…