ಮೊನ್ನೆ ಆಫೀಸಿನಿಂದ ರಾತ್ರಿ ತಡವಾಗಿ ಬಂದೆ. ಸಿಲ್ಕ್ ಬೋರ್ಡ್ ನಿಂದ ಆಟೋ ರಿಕ್ಷಾ ತೆಗೆದುಕೊಂಡೆ. ಮನೆಯ ಬಳಿ ಆಟೋ ಚಾಲಕನಿಗೆ, "ಇಲ್ಲಿ right ತೆಗೊಳ್ಳಿ.", ಅಂದಾಗ ಅವನು, "ಗೊತ್ತು ಸಾರ್. ಮೊದಲು ಒಮ್ಮೆ ನಿಮ್ಮನ್ನ drop ಮಾಡಿದೀನಿ .", ಅಂದ! "ಪರ್ವಾಗಿಲ್ವೇ!", ಅಂದುಕೊಂಡೆ ನಾನು.
"ಯಾವಾಗಲೂ night duty ನ ನೀವು?", ಎಂದು ಕೇಳಿದೆ. "ಹೌದು ಸರ್. ಬೆಳಿಗ್ಗೆ ಐದರವರೆಗೆ ಆಟೋ ಓಡಿಸ್ತೀನಿ. ಹಗಲು ಹೊತ್ತು ಗಾರೆ ಮೇಸ್ತ್ರಿ ಕೆಲಸ ಮಾಡ್ತೀನಿ", ಎಂದ. "ಹಗಲು-ರಾತ್ರಿ ಕೆಲಸ ಮಾಡ್ತಿದೀರ!", ಎಂದು ನಾನು ಹೇಳಿದ್ದಕ್ಕೆ, "ಏನು ಮಾಡೋದು ಸರ್. ಮಕ್ಳನ್ನ ಓದಿಸ್ಬೇಕಲ್ಲ!", ಎಂದು ನಕ್ಕ.
- ಆಟೋ ಚಾಲಕರ ಬಗ್ಗೆ ಏನಾದರೂ ಬರೆಯಬೇಕು ಅಂದುಕೊಂಡು ತುಂಬಾ ಸಮಯವಾಯಿತು. ಈ ಆಟೋದವನನ್ನು ನೋಡಿದ ಮೇಲೆ ಬರೆಯಲೇಬೇಕು ಅಂದುಕೊಂಡೆ. ನಾನು ಎಷ್ಟೋ ವರ್ಷಗಳಿಂದ ಆಟೋದಲ್ಲಿ ಪ್ರಯಾಣಿಸುತ್ತಿದ್ದೇನೆ. ಎಲ್ಲ ರೀತಿಯ ಆಟೋದವರನ್ನ್ನು ನಾನು ನೋಡಿದ್ದೇನೆ. "ಹೀಗೂ ಇರುತ್ತಾರಾ!", ಎಂದು ಆಶ್ಚರ್ಯವಾದದ್ದಿದೆ - ಕೆಲವೊಮ್ಮೆ ಅವರ ಒಳ್ಳೆತನದಿಂದ , ಕೆಲವೊಮ್ಮೆ ಕೆಟ್ಟತನದಿಂದ. ಕೆಲವರು ಹೆಚ್ಚು ದುಡ್ಡು ಕೇಳಿದರೆ ಇನ್ನು ಕೆಲವರು ದುಡ್ಡಿಗಾಗಿ ಮೋಸದ ದಾರಿ ಹಿಡಿಯುತ್ತಾರೆ. ಇನ್ನು ಕೆಲವರು ಒಳ್ಳೆತನದಿಂದ ಅಚ್ಚರಿಗೊಳಿಸುತ್ತಾರೆ. ಆದರೆ ನನಗನ್ನಿಸುವುದೇನೆಂದರೆ, ಎಲ್ಲ ಉದ್ಯೋಗಗಳಲ್ಲಿನಂತೆ ಇದರಲ್ಲೂ ಎಲ್ಲ ಥರದ ಜನರಿದ್ದಾರೆ.
ಆಟೋ ಚಾಲಕರು ಮೋಸ ಮಾಡುವ ಅತಿ ಸಾಮಾನ್ಯ ವಿಧಾನವೆಂದರೆ meter tampering. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಸಾಕಷ್ಟು ಜನರಿಗೆ ಗೊತ್ತಿಲ್ಲದ ವಿಧಾನ ಒಂದಿದೆ. ಇದು ಸಾಧಾರಣವಾಗಿ ರಾತ್ರಿ ಅಥವಾ ಮುಂಜಾನೆಗಳಲ್ಲಿ; ಒಟ್ಟಿನಲ್ಲಿ ಹೊರಗೆ ಬೆಳಕು ಕಡಿಮೆ ಇರುವಾಗ ಬಳಸುವ ವಿಧಾನ. ಆಟೊ ಛಾರ್ಜು ೨೦೦ ರೂಪಾಯಿಯಾಗಿದೆ ಎಂದಿಟ್ಟುಕೊಳ್ಳಿ. ನೀವು ನೂರು ರುಪಾಯಿಯ ಎರಡು ನೋಟುಗಳನ್ನು ಕೊಟ್ಟಿದ್ದರೆ ಚಾಲಕ ಅವುಗಳನ್ನು ಎಲ್ಲೋ ಮಾಯ ಮಾಡಿ, ತನ್ನ ಚಾಕಚಕ್ಯತೆಯಿಂದ ಹತ್ತರ ನೋಟುಗಳನ್ನು ತೋರಿಸಿ, "ನೋಡಿ, ೨೦ ರುಪಾಯಿ ಕೊಟ್ಟಿದ್ದೀರ." ಎನ್ನುತ್ತಾನೆ! ನೀವು ತುಂಬಾ ಲೆಕ್ಕಾಚಾರದ ಮನುಷ್ಯರಾಗಿದ್ದರೆ, ವಾದ ಮಾಡಿ, ದನಿ ಎತ್ತರಿಸಿ ಹೇಗೊ ಅವನ ಆಟವನ್ನು ಬಯಲು ಮಾಡಬಹುದು. ಆದರೆ, ನಿಮಗೆ ಸಂಶಯವಿದ್ದಲ್ಲಿ, ನೀವು ಸುಲಭವಾಗಿ ಮೋಸ ಹೋಗುತ್ತೀರಿ. (ನಾನು ಮೋಸ ಹೋಗಿದ್ದೇನೆ!)
ಆಟೋ ಚಾಲಕರ ಇನ್ನೊಂದು ತಲೆ ಚಿಟ್ಟು ಹಿಡಿಸುವ ಚಾಳಿ ಎಂದರೆ, "ಬರುವಾಗ ಖಾಲಿ ಬರ್ಬೇಕು. ೧೦ ರುಪಾಯಿ ಸೇರಿಸಿ ಕೊಡಿ", ಎಂದು ಬೇಡಿಕೊಳ್ಳುವುದು. ತಮಿಳು ಚಲನಚಿತ್ರವೊಂದರಲ್ಲಿ ವಡಿವೇಲು, "ಬರುವಾಗ ಖಾಲಿ ಬರದ ಹಾಗೆ ನಾನು ನೋಡಿಕೊಳ್ಳುತ್ತೇನೆ.", ಎಂದು ಆಟೋದವನಿಗೆ ಭರವಸೆ ಕೊಟ್ಟು ತನ್ನ ಸ್ಥಳದಲ್ಲಿ ಇಳಿದ ಮೇಲೆ ಆಟೋದಲ್ಲಿ "ಮರಳು ಚೀಲಗಳನ್ನು" ತುಂಬಿಸುತ್ತಾನೆ! ನಂತರ, "ಈಗ ಖಾಲಿ ಇಲ್ಲ ನೋಡು", ಎಂದು ಕಿಚಾಯಿಸುತ್ತಾನೆ. ಎಲ್ಲರಿಗೂ ಹೀಗೆಯೇ ಮಾಡಲಿಕ್ಕಾದರೆ ಒಳ್ಳೆಯದಿತ್ತು! ಇನ್ನೊಂದು ಮಲಯಾಳ ಚಿತ್ರದಲ್ಲಿ, ಹಾಸ್ಯ ನಟನೊಬ್ಬ, "meter ಬಿಚ್ಚಿ ಕೊಡುತ್ತೀರ? ನೀವಂತೂ ಉಪಯೋಗಿಸುವುದಿಲ್ಲ, ಮನೆಯಲ್ಲಿ ಮಕ್ಕಳಿಗೆ ಆಡಲಿಕ್ಕೆ ಕೊಡುತ್ತೇನೆ", ಎಂದು ಕಿಚಾಯಿಸುತ್ತಾನೆ!
ಆಟೊ ಚಾಲಕರಲ್ಲಿ ಸಾಮಾನ್ಯವಾಗಿ ಕಾಣ ಬರುವ ನಡವಳಿಕೆ ಎಂದರೆ ಗಿರಾಕಿಯನ್ನು ಆದಷ್ಟು ಹಿಂಡಿ ಹಾಕುವ ಸ್ವಭಾವ. ಮೋಸ ಮಾಡುವುದು ತುಂಬ ಸ್ವಾಭಾವಿಕ ಎಂಬ ಭಾವನೆ, ಮತ್ತು ಮೋಸ ಮಾಡುವುದನ್ನೇ ವ್ಯವಹಾರ ಚಾತುರ್ಯ ಎಂಬ ನಂಬಿಕೆ. ಇದು ಬಹುಷಃ ಈಗ ಎಲ್ಲ ಉದ್ಯೋಗಗಳಲ್ಲೂ ಇದೆ!
ಆಟೋ ಚಾಲಕರಿಗೆ driving sense ಇಲ್ಲ ಎಂಬುದು ಸಾಮಾನ್ಯ ಅಭಿಪ್ರಾಯ. ನಿಮ್ಮ ಮುಂದೆ ಆಟೊವೊಂದು ಹೋಗುತ್ತಿದ್ದರೆ ಅದು ಯಾವ ದಿಕ್ಕಿನಲ್ಲಾದರೂ ತಿರುಗಬಹುದು, ಮತ್ತು ನೀವದಕ್ಕೆ ತಯಾರಾಗಿರಬೇಕು! ರಸ್ತೆಯ ಎಡ ಬದಿಯಲ್ಲಿ ನಿಧಾನವಾಗಿ ಚಲಿಸುತ್ತಿರುವ ರಿಕ್ಷಾ - ಇದೊಂದು ಸಾಮಾನ್ಯ ದೃಶ್ಯ. ಗಿರಾಕಿಗಾಗಿ ಹುಡುಕುತ್ತಿರುವಾಗ ಆಟೊ ಚಾಲಕ ಬಹಳ ನಿಧಾನವಾಗಿ ಓಡಿಸುತ್ತಾನೆ. ಈ ರಿಕ್ಷಾ ಯಾವ ಗಳಿಗೆಯಲ್ಲಾದರೂ ಗಕ್ಕನೆ ನಿಲ್ಲಬಹುದು. ತನ್ನ ಹಿಂದೆ, ಮುಂದೆ, ಎಡ ಬಲ ನೋಡಿಕೊಂಡು ಓಡಿಸಿದರೆ ಅವನು ಆಟೊ ಚಾಲಕನೇ ಅಲ್ಲ! "Defensive Driving" ಕುರಿತಾದ ಪುಸ್ತಕಗಳಲ್ಲಿ ಆಟೊ ರಿಕ್ಷಾಗಳ ಉಲ್ಲೇಖವಿರಲೇಬೇಕು. ಆಟೊ ರಿಕ್ಷಾಗಳ ಹಿಂದೆ ಹೋಗುವುದು ಅಪಾಯವನ್ನು ಆಹ್ವಾನಿಸಿದಂತೆ!
* * *
ಮಲಯಾಳದಲ್ಲಿ "ಏಯ್ ಆಟೊ" ಎಂಬ ಒಂದು ಚಲನಚಿತ್ರವಿದೆ. ಶ್ರೀಮಂತರ ಮನೆಯ ಹೆಣ್ಣೊಬ್ಬಳನ್ನು ಆಟೊ ಚಾಲಕನೊಬ್ಬ ಪ್ರೇಮಿಸುವುದೇ ಚಿತ್ರದ ಕಥಾವಸ್ತು. ಹಾಸ್ಯ ಹಾಗೂ ಮಧುರ ಭಾವನೆಗಳನ್ನು ಹಿತವಾಗಿ ಬೆರೆಸಿ ಮಾಡಿದ ಸಿನಿಮ. ಬಹುಷಃ ಚಿತ್ರ ಚೆನ್ನಾಗಿ ಓಡಿತ್ತು.
ಕನ್ನಡದಲ್ಲಿ ಮೊದಮೊದಲಿಗೆ ಆಟೊ ಚಾಲಕನ ಪಾತ್ರ ಮಾಡಿದ್ದು ಶಂಕರ್ ನಾಗ್ ಇರಬೇಕು. ಇವತ್ತಿಗೂ ಆಟೋ ಚಾಲಕರ ಆರಾಧ್ಯ ದೈವ ಶಂಕರ್ ನಾಗ್. "ನಗಬೇಕಮ್ಮ ನಗಬೇಕು" ಎನ್ನುವ ಚಿತ್ರದಲ್ಲಿ ಜಯಮಾಲ ಆಟೊ ಚಾಲಕಿಯ ಪಾತ್ರ ವಹಿಸಿದ್ದಾರೆ. ಬೆಂಗಳೂರಿನಲ್ಲಿ ನಾನು ಹೆಣ್ಣೊಬ್ಬಳು ಆಟೋ ಓಡಿಸುವುದನ್ನು ನೋಡಿಲ್ಲ, ಆದರೆ ವಾರ್ತೆಯಲ್ಲಿ ಎಲ್ಲೋ ಯಾರೋ ಓಡಿಸುತ್ತಿರುವ ಸುದ್ದಿ ಕೇಳಿದ್ದೇನೆ.
ಆಟೊ ರಿಕ್ಷಾಗಳ ಹಿಂದೆ ಸಾಧಾರಣವಾಗಿ, ಶಂಕರ್ ನಾಗ್, ಡಾ। ರಾಜ್ ಕುಮಾರ್, ವಿಷ್ಣುವರ್ಧನರ ಚಿತ್ರಗಳಿರುತ್ತವೆ. ಹಿಂದಿ ನಟರಲ್ಲಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ರ ಚಿತ್ರಗಳು ಕಂಡು ಬರುತ್ತವೆ. ಕೆಲವು ಶಾರೂಕ್ ಖಾನ್ ಪ್ರೇಮಿಗಳೂ ಇದ್ದಾರೆ. ಸಿನಿಮ ನಟರ ಗೋಜಿಗೆ ಹೋಗದೆ, "Mother's Gift" ಎಂದು ಬರೆಸಿಕೊಳ್ಳುವ ಮಾತೃ ಭಕ್ತರು ಇದ್ದಾರೆ. "ಇದು ಕನ್ನಡಿಗನ ತೇರು. ಕೈ ಮುಗಿದು ಏರು", ಎನ್ನುವ ಮಾತು ತುಂಬಾ ಪ್ರಸಿದ್ಧವಾಗಿದೆ. "ಸಾರಥಿ" ಚಿತ್ರದಲ್ಲಿ ನಾಯಕ ಆಟೊ ಚಾಲಕ. ಅದರಲ್ಲಿ ನಾಯಕ ತನ್ನ ಆಟೊದ ಹಿಂದೆ, "ಪ್ರೀತಿ ಕಾಣದಿದ್ದರೇನು, ಪ್ರೀತಿಸಿದವಳು ಕಾಣೊಲ್ವ? ಪ್ರೀತಿಸಿದವಳು ಸಿಕ್ಕ ಮೇಲೆ ಪ್ರೀತಿ ಸಿಗೋಲ್ವ?", ಎಂದು ಬರೆಸಿಕೊಂಡಿರುತ್ತಾನೆ. ನಾಯಕಿ ಸೈಕಾಲಜಿ ವಿದ್ಯಾರ್ಥಿ, ಈ ಸಾಲುಗಳ ಮೇಲೆ ಅಧ್ಯಯನ ನಡೆಸ ಹೊರಟು ನಾಯಕನನ್ನು ಪ್ರೀತಿಸತೊಡಗುತ್ತಾಳೆ! ವಾಸ್ತವದಲ್ಲಿ, ನನಗೆ ಆ ಸಾಲುಗಳು ಅರ್ಥವಾಗಲಿಕ್ಕೆ ಬಹಳ ಸಮಯ ಹಿಡಿಯಿತು. ಮತ್ತು ಈಗಲೂ ನನಗೆ ಸರಿಯಾಗಿ ಅರ್ಥವಾಗಿದೆಯೇ ಎಂಬ ಬಗ್ಗೆ ಸಂಶಯವಿದೆ! ಇದು ಏನೇ ಇದ್ದರೂ, ಆಟೋಗಳ ಹಿಂದೆ ಬರೆಸಿಕೊಳ್ಳುವ ಸಾಲುಗಳು ನಿಜಕ್ಕೂ ಬಹಳ ಕುತೂಹಲಕಾರಿಯಾಗಿರುತ್ತವೆ. ನಾನು ಏನಾದರೂ ಹೊಸ ಸಾಲುಗಳನ್ನು ಕಂಡರೆ photo ತೆಗೆದುಕೊಳ್ಳುತ್ತೇನೆ. ನನ್ನ ಮಿತ್ರನೊಬ್ಬ ಈ ಸಾಲುಗಳನ್ನು "Auto Suggestions" ಎಂದು ಕರೆಯುತ್ತಾನೆ! ನಾನು ಇದೇ ಹೆಸರಿನಲ್ಲಿ ನನ್ನ ಬ್ಲಾಗ್ ನಲ್ಲಿ ಈ ಸಾಲುಗಳ ಫೋಟೋಗಳನ್ನು post ಮಾಡುತ್ತಿದ್ದೆ. (ಈಗ ಸ್ವಲ್ಪ ಸಮಯದಿಂದ ಏನನ್ನೂ ಹಾಕಿಲ್ಲ)
"ಸೋಮಾರಿ ಕಟ್ಟೆ" ಎಂಬ ಹೆಸರಿರುವ ಈ ಬ್ಲಾಗ್ ನಲ್ಲಿ ಆಟೊ ಅಣಿಮುತ್ತುಗಳು ಎಂಬ ಹೆಸರಿನಲ್ಲಿ ಈ ಸಾಲುಗಳನ್ನು post ಮಾಡಲಾಗುತ್ತಿದೆ - http://somari-katte.blogspot.in/
ಎಲ್ಲೋ ಟ್ರಾಫಿಕ್ ಮಧ್ಯೆ ತಲೆ ಕೆಡಿಸಿಕೊಳ್ಳುತ್ತಿರುವಾಗ ಈ ಆಟೊ ಅಣಿ ಮುತ್ತುಗಳು ನೋಡಿದವರು ನಗುವಂತೆ, ಯೋಚಿಸುವಂತೆ ಮಾಡುತ್ತವೆ ಎಂಬುದು ಸತ್ಯ.
* * *
ಆಟೊ ಚಾಲಕರು ಇಡಿಯ ದಿವಸ ಧೂಳು, ಹೊಗೆ, ಕರ್ಕಶ ಶಬ್ದದ ನಡುವೆ ಬದುಕುತ್ತಾರೆ. ಬಸ್ಸು, ಲಾರಿಗಳಂಥ ದೊಡ್ಡ ವಾಹನಗಳ ಹೊಗೆ ನೇರವಾಗಿ ಆಟೊದೊಳಗೆ ನುಗ್ಗುತ್ತದೆ. ಇಡಿಯ ದಿವಸ ಇದನ್ನೆಲ್ಲಾ ನುಂಗಿಕೊಂಡು ದುಡಿಯಬೇಕು. ಇದೆಲ್ಲ ಅವರ ಮನಸನ್ನು ಘಾಸಿ ಮಾಡಿಯೇ ಮಾಡುತ್ತದೆ. ಹಾಗಾಗಿ ಅವರು ಒರಟಾಗಿ ವರ್ತಿಸುವುದರಲ್ಲಿ ಆಶ್ಚರ್ಯವಿಲ್ಲ ಅನಿಸುತ್ತದೆ. ತಮ್ಮ ಬದುಕುಗಳ ಮೇಲೆಯೇ ಇರುವ ಸಿಟ್ಟು ಗಿರಾಕಿಗಳತ್ತ ಹರಿಯುತ್ತದೆ.
ಒಮ್ಮೆ ಆಟೋವೊಂದರಲ್ಲಿ ಜೋರಾಗಿ ಹಿಂದಿ ಹಾಡು ಹಾಕಿದ್ದ ಚಾಲಕ. ಅವನು ಮುಸಲ್ಮಾನನಿದ್ದ, ಮತ್ತು ಅದು ರಂಜಾನ್ ತಿಂಗಳಿತ್ತು. ಯಾವುದೋ ಸಿಗ್ನಲ್ ನಲ್ಲಿ, ಮೌಲ್ವಿಯೊಬ್ಬ ಇವನನ್ನು ನೋಡಿ ಉರ್ದುವಿನಲ್ಲಿ ಏನೋ ಬೋಧಿಸಿದ. ಬಹುಷಃ ರಂಜಾನ್ ತಿಂಗಳಿನಲ್ಲಿ ಸಂಗೀತ ಕೇಳಬಾರದೆಂದು ಹೇಳಿದನೆಂದು ನೆನಪು. ಮೌಲ್ವಿ ಅತ್ತ ಹೋಗುತ್ತಿದ್ದಂತೆ ಚಾಲಕ ನನ್ನಲ್ಲಿ ಹೇಳಿದ, "ಇಡಿ ದಿವಸ ಗಾಡಿ ಓಡಿಸ್ತೀನಿ. ಕೆಲವು ಸಲ ಮಾತಾಡೊ ಗಿರಾಕಿಗಳು ಸಿಗುತ್ತಾರೆ. ಕೆಲವು ಜನ ಮಾತಾಡೋದೇ ಇಲ್ಲ. ಅದಿಕ್ಕೆ ಹಾಡು ಕೇಳ್ತೀನಿ. ಇಲ್ದಿದ್ರೆ ಈ ಟ್ರಾಫಿಕ್ ನಲ್ಲಿ ಹೇಗೆ ಗಾಡಿ ಓಡಿಸೋದು!"
ವೃತ್ತಿಯ ಬಗ್ಗೆ ಅಪಾರ ಗೌರವ ಇರುವ ಕೆಲವು ಚಾಲಕರನ್ನು ನೋಡಿದ್ದೇನೆ. ಒಮ್ಮೆ ನಾನು ಹತ್ತಿದ್ದ ಆಟೊ ಜಯನಗರದ ಯಾವುದೋ ಗಲ್ಲಿಯಲ್ಲಿ ಕೆಟ್ಟು ಹೋಯಿತು. ಅಲ್ಲಿಂದ ಇನ್ನೊಂದು ಆಟೊ ಹುಡುಕುವುದು ಹೇಗೆ ಎಂದು ನಾನು ತಲೆ ಕೆಡಿಸಿಕೊಳ್ಳುತ್ತಿರುವಾಗ ಒಂದು ಆಟೊ ಬಂತು. "ಬಸವನಗುಡಿ ಬರ್ತೀರಾ?", ಎಂದು ಕೇಳಿದಾಗ, "ಬರ್ತೀರಾ ಅಂತ ಯಾಕೆ ಕೇಳ್ತೀರ ಸರ್? ಎಲ್ಲಿ ಕರೆದರೂ ಬರ್ತೀನಿ.", ಅಂದ. ಆಟೊ ಹತ್ತಿ ಕುಳಿತ ಬಳಿಕ ನಾನು, "ಎಲ್ರೂ ನಿಮ್ಮ ಹಾಗೆ ಇರ್ಬೇಕಲ್ವ ಸರ್." ಅಂದೆ. "ಜನರಿಗೆ ಭಯ ಸರ್. ದಾರಿ ಗೊತ್ತಿಲ್ದಿದ್ರೆ ಬರೋಲ್ಲ ಅಂತಾರೆ", ಅಂದ. ಮುಂದುವರೆಸಿ, "ನನಗೆ ಮೊದಲಿಗೆ ಒಬ್ರು ಕೆಂಗೇರಿಗೆ ಕರ್ದಾಗ ಭಯ ಆಗಿತ್ತು. ಆದರೆ ಮತ್ತೆ ಗೊತ್ತಾಯ್ತು, ದಾರಿ ಗೊತ್ತಿಲ್ಲ ಅಂತ ಕೂತರೆ ಯಾವತ್ತಿಗೂ ಗೊತ್ತಾಗೊಲ್ಲ. ಒಮ್ಮೆ ಕಲಿತುಕೊಂಡರೆ, ಮತ್ತೆ ಭಯ ಇರೋಲ್ಲ. ಈಗ ನಾನು ಎಲ್ಲಿಗೆ ಕರೆದ್ರೂ ಹೋಗ್ತಿನಿ.", ಎಂದ.
ಇನ್ನೊಬ್ಬ ತನ್ನ ಆಟೊ ನಂಬರ್ ತೋರಿಸಿ, "ನಾನು ನಲವತ್ತು ವರ್ಷಗಳಿಂದ ಆಟೊ ಓಡಿಸ್ತಾ ಇದ್ದೀನಿ", ಅಂದ. ಅವನ ಆಟೊ ನಂಬರ್ ೭೦ ಎಂದು ನೆನಪು. ಬೆಂಗಳೂರಿನಲ್ಲಿ ಆಟೊ ಶುರುವಾದಾಗಿನಿಂದಲೂ ತಾನು ಆಟೊ ಓಡಿಸುತ್ತಿದ್ದೇನೆ ಎಂದು ಅವನು ಏನೋ ಕಥೆಗಳನ್ನು ಹೇಳಿದ್ದು ನೆನಪು. ಅವನ ಮಕ್ಕಳೆಲ್ಲ ಉತ್ತಮ ಶಿಕ್ಷಣ ಪಡೆದು ಉದ್ಯೋಗಗಳನ್ನು ಹುಡುಕಿಕೊಂಡಿದ್ದರು. ಅವನಲ್ಲಿ ತನ್ನ ವೃತ್ತಿಯ ಬಗ್ಗೆ, ತನ್ನ ಬದುಕಿನ ಬಗ್ಗೆ, ಅಪಾರ ಹೆಮ್ಮೆಯನ್ನು ಕಂಡೆ.
ಇನ್ನೊಬ್ಬ ನಾನು ಆಟೊ ಹತ್ತುತ್ತಿದ್ದಂತೆ "Deccan Herald" ಪತ್ರಿಕೆ ಕೊಟ್ಟು, "ಓದಿ ಸರ್", ಎಂದ! ನಾನು ಆ ದಿನಗಳಲ್ಲಿ ಪತ್ರಿಕೆಗಳನ್ನೇ ಓದುತ್ತಿರಲಿಲ್ಲ. ಈ ಮನುಷ್ಯ ತಾನು ಓದಲು ಕೊಂಡಿದ್ದ ಪತ್ರಿಕೆಯನ್ನು ತನ್ನ ಗಿರಾಕಿಗೆ ಕೊಟ್ಟು ಓದಲು ಹೇಳಿದ್ದು ನನಗೆ ಆಶ್ಚರ್ಯವಾಯಿತು; pleasant surprise! ಆಟೊ ಇಳಿಯುವಾಗ ಅವನು, "Have a good day sir", ಎಂದ! ಆಟೋದವರ ಬಗ್ಗೆ ನನಗಿದ್ದ ಸಿಟ್ಟು, ಕೆಟ್ಟ ಅಭಿಪ್ರಾಯಗಳನ್ನೆಲ್ಲ ಇವನೊಬ್ಬನೆ ಅಳಿಸಿ ಹಾಕಿದ!
* * *
ಒಳ್ಳೆತನದಿಂದ ಪ್ರಪಂಚಕ್ಕಾದ ಲಾಭ ಅಷ್ಟರಲ್ಲೇ ಇದೆ. ಕೆಟ್ಟತನದಿಂದ ಪ್ರಪಂಚಕ್ಕಾದ ನಷ್ಟ ಎಷ್ಟಿದೆಯೋ ಗೊತ್ತಿಲ್ಲ. ಆದರೆ ಒಳ್ಳೆಯದು, ಕೆಟ್ಟದ್ದು ಎಂಬ ವಿಂಗಡಣೆಯಿಂದ ಪ್ರಪಂಚಕ್ಕೆ ಏನೂ ಒಳ್ಳೆಯದಾಗಿಲ್ಲ. ಯಾರ ಬಗ್ಗೆಯೂ ಪೂರ್ವಗ್ರಹ ಪ್ರೇರಿತ ಅಭಿಪ್ರಾಯಗಳಿರದೆ, ಪ್ರತಿ ಸಲವೂ ಹೊಸತೆಂಬಂತೆ ನೋಡಿದರೆ ಬಹುಷಃ ಪ್ರಪಂಚ ಸರಿಯಾಗಿ ಅರ್ಥವಾಗಬಹುದು. ಈ ಮಾತು ನಾವು ಆಟೊ ಚಾಲಕರನ್ನು ನೋಡುವ ರೀತಿಗೂ ಅನ್ವಯವಾಗುತ್ತದೆ.
ಎಲ್ಲ ಮನುಷ್ಯರಲ್ಲಿರುವ ಒಳ್ಳೆತನ-ಕೆಟ್ಟತನಗಳೇ ಇವನಲ್ಲೂ ಇದೆ. ಬದುಕಿಗಾಗಿ ಇವನೂ ಒಂದು ವೇಷ ಹಾಕಿಕೊಂಡಿದ್ದಾನೆ, ಮೋಸ ಮಾಡುತ್ತಾನೆ, ತನಗಾಗಿ, ತನ್ನ ಮನೆಯವರಿಗಾಗಿ ಒಂದಿಷ್ಟು ಕಾಸು ಹೆಚ್ಚು ಸಂಪಾದಿಸಲು ಬುದ್ಧಿ ಖರ್ಚು ಮಾಡುತ್ತಾನೆ. "ಏಯ್ ಆಟೊ", ಎನ್ನುವಾಗ ಇದನ್ನೆಲ್ಲ ಒಮ್ಮೆ ಅರ್ಥ ಮಾಡಿಕೊಂಡರೆ ಅವನೂ ಅರ್ಥವಾಗುತ್ತಾನೆ, ಅವನ ಮೋಸಗಳೂ ಅರ್ಥವಾಗಬಹುದು.

Olle analysis Kiran, chenagide.Nimma blog, nange auto riskshagala jothe aada exprerience melaku hako thara madithu.
ReplyDeleteಸಾಮಾನ್ಯವಾಗಿ ಆಟೋ ಅಂದ್ರೆ ಎಲ್ಲರಿಗು ಅವರದೇ ಆದ ಕೆಟ್ಟ ಪ್ರಸಂಗ ನೆನಪಿಗೆ ಬರುತ್ತೆ. ಆದ್ರೆ ಎಲ್ಲೋ ಒಮ್ಮೆ ಅಚಾನಕ್ ಆಗಿ ಸಿಗುವ ಒಬ್ಬ ಅಪರೂಪದ ಆಟೋ ಡ್ರೈವರ್ ಇವತ್ತಿಗೂ ನಮ್ಮನ್ನು "ಏಯ್ ಆಟೋ" ಅಂತ ಕರೆದು.. ಕುಳ್ಳಿರಿಸಲು ಪ್ರಚೋದಿಸುತ್ತೆ.
ReplyDeletehowdu Balu, nija.
ReplyDeleteodiddakke dhanyavadagaLu!