Dec 11, 2011

ವಿಷ್ಣುವರ್ಧನ

Vishnuvardhana

ವಿಷ್ಣುವರ್ಧನ ಎಂಬ ಹೆಸರಿನ ಬಗ್ಗೆ ಹಿಂದೆ ವಿವಾದ ನಡೆದಿತ್ತು. ಈ ಹೆಸರು ದ್ವಾರಕೀಶರ ದುಡ್ಡು ಮಾಡುವ ತಂತ್ರ ಎಂಬುದು ಸ್ಪಷ್ಟ. ಆದರೆ ನಿರ್ದೇಶಕ ಪಿ. ಕುಮಾರ್ ಆ ಹೆಸರಿಗೆ, ಅದು ಉಂಟು ಮಾಡಿರಬಹುದಾದ ನಿರೀಕ್ಷೆಗೆ ನ್ಯಾಯ ಸಲ್ಲಿಸಿದ್ದಾರೆ. ಇದು ಒಂದು ಪಕ್ಕಾ ಮಸಾಲೆ ಚಿತ್ರ. ಬಹಳ ಸಮಯದ ನಂತರ ಕನ್ನಡದಲ್ಲಿ ಬಂದಿರುವ ಒಳ್ಳೆಯ ಮನರಂಜನೀಯ ಚಿತ್ರ.
ಚಿತ್ರಕಥೆ ಬಿಗಿಯಾಗಿದೆ. ನಿರ್ದೇಶಕರು ನಿರೂಪಣೆಯನ್ನು ಸಂಪೂರ್ಣ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಕಥೆ ಬಹಳ ಬೇಗ take-off ಆಗುತ್ತದೆ, ಮತ್ತು ಎಲ್ಲೂ ಸಮಯ ವ್ಯರ್ಥವಾಗಿ ಕಳೆದಿಲ್ಲ. ಹಾಸ್ಯವೂ ಕಥೆಯ ಅಂಶವೇ ಆಗಿರುವುದರಿಂದ ಅಲ್ಲೂ ಸಮಯ ವ್ಯರ್ಥವಾಗಿಲ್ಲ. ಸುದೀಪ್ ನಟನೆ lovely and lively ಆಗಿದೆ. ಹರಿಕೃಷ್ಣ ಸಂಗೀತ ಇನ್ನೂ ಚೆನ್ನಾಗಿರಬಹುದಾಗಿತ್ತು. ಪೋಷಕ ನಟರೆಲ್ಲರೂ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಜನರನ್ನು theatre ಗಳತ್ತ ಬರುವಂತೆ ಮಾಡುವ ಶಕ್ತಿಯಿರುವ ಒಂದು ಉತ್ತಮ ಚಿತ್ರ ವಿಷ್ಣುವರ್ಧನ.
 

Nov 13, 2011

Rockstar


Rockstar 

You will love the first half. But you will equally hate the second half. Ranbir Kapoor proves he is a star. Rahman need not prove himself anymore. But Imtiaz Ali fails. He sets a vast canvas for the film, and manages to hold things together in the first half. But the second half is far from convincing. I couldn't connect to JJ's pain when he said something about the "lost angels"; "Main un parindo ko dhundh raha hoon...kisi ne dekha hain unhe?" The song "Sadda Haq" comes from nowhere, and the base for this song is not set in the movie. It doesn't take the story anywhere; just adding a song on personal freedom cannot change the theme of the movie.


Imtiaz Ali was brilliant in "Jab We Met". He had managed to get fine performances. The movie had catchy dialogues. The theme was fresh. It didn't give in to stereotypes.


"Rockstar" is heavy drama. Imtiaz makes you feel very helpless in the second half. JJ's behavior has no logic. And there is no other lead character that balances JJ's madness. The movie is not about personal freedom; it is about being illogical and irresponsible!

Oct 9, 2011

ಅಯ್ಯೋ ಪರಮಾತ್ಮ, ಭಟ್ರು ಕೈ ಕೊಟ್ರು!
  • ಸಿನಿಮಾ ಪ್ರಾರಂಭವಾದ ಹತ್ತು ನಿಮಿಷಕ್ಕೆ ಪರಮಾತ್ಮ ಎಂಬ ಹೆಸರಿರುವ ನಾಯಕ ಹಿಮಾಲಯ ಹತ್ತಿ ಮುಗಿಸಿರುತ್ತಾನೆ, ಕುಂಗ್-ಫೂ ಕಲಿತು ಬಂದಿರುತ್ತಾನೆ, ಮುಂಬೈನಲ್ಲಿ ಶೇರು ಮಾರುಕಟ್ಟೆಯ ತಂತ್ರಗಳನ್ನು ಕಲಿತು ಲಾಭ ಹೊಂದಿರುತ್ತಾನೆ, ಇಲ್ಲೊಂದು ವಿಂಡ್-ಮಿಲ್ ಫ್ಯಾಕ್ಟರಿಯ ಮಾಲಿಕನಾಗಿರುತ್ತಾನೆ. ಹಾಗಿದ್ದಲ್ಲಿ ಇನ್ನು ಏನೇನು ಮಾಡಬಹುದು ಇವನು ಎನ್ನುವುದು ಸಿನಿಮಾದ ಕಥೆ ಎಂದು ನೀವು ಅಂದುಕೊಂಡರೆ ತಪ್ಪು, ಪರಮಾತ್ಮ ಏನೂ ಮಾಡದೇ ಇರುವಾಗ ಹೇಗಿರುತ್ತಾನೆ ಎನ್ನುವುದು ಈ ಸಿನಿಮಾದ ಕಥೆ ಇದ್ದಂತಿದೆ! ಅಥವಾ ಏನೂ ಮಾಡದೇ ಇದ್ದರೆ ಪರಮಾತ್ಮನಾಗುತ್ತೀರಿ ಎನ್ನುವುದು ಈ ಸಿನಿಮಾದ ಸಂದೇಶವೇ?  
  •  ಪರಮಾತ್ಮ ಎನ್ನುವುದು ನಾಯಕನ ಹೆಸರು ಎಂಬುದು ಬಿಟ್ಟರೆ ಅವನಲ್ಲಿ ಪರಮತ್ಮನಾಗುವ ಯಾವ ಲಕ್ಷಣಗಳೂ ಇಲ್ಲ. ಒಮ್ಮೆ  ಜೀವನದ ಅರ್ಥ ತಿಳಿದುಕೊಳ್ಳಲು ಟಿಬೆಟಿಗೆ ಹೋಗಿದ್ದು ಬಿಟ್ಟರೆ (ಸಿನಿಮ ಪ್ರಾರಂಭವಾದ ಮೊದಲ ಹತ್ತು ನಿಮಿಷಗಳಲ್ಲಿ ಇದೂ ಆಗಿ ಹೋಗಿರುತ್ತದೆ), ಅವನಲ್ಲಿ ಅಧ್ಯಾತ್ಮಿಕತೆಯ ಯಾವ ಅಂಶವೂ ಕಂಡು ಬರುವುದಿಲ್ಲ. ಸಮಾಜದ ಯಾವ ಆಗು ಹೋಗುಗಳೂ ಇವನ "scheme of things " ನಲ್ಲಿ ಇಲ್ಲ. "ದುಡ್ಡು ಬರ್ತಾನೆ ಇತ್ತು, ಬರ್ತಾ ನೆಮ್ಮದಿ ಹಾಳಾಯ್ತು" ಎಂದು ಒಮ್ಮೆ ಹೇಳುವ ನಾಯಕ, ಒಬ್ಬ ಭಿಕ್ಷುಕನಿಗಾಗಲಿ, ಕೊನೆಯ ಪಕ್ಷ ಒಬ್ಬ ಸ್ನೇಹಿತನಿಗಾಗಲಿ ಯಾವುದೇ ರೀತಿಯ ಸಹಾಯ ಮಾಡುವ ಒಂದು ಸನ್ನಿವೇಶವೂ ಸಿನಿಮಾದಲ್ಲಿಲ್ಲ. ಇದೆಲ್ಲ ಇರಲೇಬೇಕು ಎಂದು ಅಲ್ಲ, ಆದರೆ ಇಷ್ಟು ಮಾಡದೇ ಒಬ್ಬ ವ್ಯಕ್ತಿ ಪರಮಾತ್ಮನಾಗಲು ಸಾಧ್ಯವಾಗುವುದಾದರೆ ನಮ್ಮ ಸಮಾಜದ ತುಂಬೆಲ್ಲ ಬರಿ ಪರಮಾತ್ಮರೆ ತುಂಬಿದ್ದಾರೆ ಎನ್ನಬಹುದು. ಅನಿಸಿದ್ದನ್ನು ಮಾಡಿದವರೆಲ್ಲ ಪರಮಾತ್ಮರಲ್ಲ!
  • ನಾಯಕಿಯ ಪಾತ್ರಕ್ಕೆ ಹುಚ್ಚು ಇದೆಯೇ ಎಂದು ಒಂದಕ್ಕಿಂತ ಹೆಚ್ಚು ಬಾರಿ ಅನಿಸುತ್ತದೆ. ನಗುವುದು, ಕಿರುಚುವುದು ಬಿಟ್ಟರೆ ಬೇರೆ ಏನೂ ಮಾಡಿದಂತಿಲ್ಲ ನಾಯಕಿ. ನಾಯಕನಿಗೆ ಅವಳಲ್ಲಿ ಅಂಥದ್ದೇನು ಕಂಡಿತು ಎಂಬುದಕ್ಕೆ ಉತ್ತರ ಇಲ್ಲ. ನಾಯಕ ಅದರ ಬಗ್ಗೆ ಮಾತಾಡುವುದೇ ಇಲ್ಲ. ಪ್ರೇಮಕ್ಕೆ ಕಾರಣ ಇರಲೇಬೇಕು ಎಂದೇನು ಇಲ್ಲ, ಸರಿ, ಆದರೆ ಯಾವ ಘಳಿಗೆಯಲ್ಲಿ ಪ್ರೇಮವಾಯಿತು ಎಂದಾದರು ಗೊತ್ತಾಗಬೇಕಲ್ಲ! ಅದರ ಬಗ್ಗೆ ಮಾತೇ ಇಲ್ಲ, ನಾಯಕ ಕಾರು ತೆಗೆದುಕೊಂಡು ನಾಯಕಿಯ ಊರಿಗೆ ಅವಳನ್ನು ಹಿಂಬಾಲಿಸಿಕೊಂಡು ಹೋಗಿ ಬಿಡುತ್ತಾನೆ. ಅರ್ಧ ಸಿನಿಮ ಮುಗಿಯುವ ವೇಳೆಗೆ ಒಮ್ಮೆ, "ಅವಳ ಕೂದಲಲ್ಲಿ, ಮೂಗುತಿಯಲ್ಲಿ ಒಂದು ಹಾಡು ಕೇಳುತ್ತದೆ. ಅದು ನನಗಿಷ್ಟ" ಎಂದು ನಾಯಕ ಹೇಳುವಾಗ ಪ್ರೇಕ್ಷಕನಿಗೆ ನಂಬಿಕೆ ಬರುವುದಿಲ್ಲ. ಸ್ವತಃ ನಾಯಕನಿಗೆ ಆ ಮಾತಿನಲ್ಲಿ ನಂಬಿಕೆ ಇದ್ದಂತಿಲ್ಲ. 
  •  ನಾಯಕನಿಗೆ ತನ್ನ ಸ್ನೇಹಿತರ ನೋವು ತಟ್ಟುವುದಿಲ್ಲ. ಪಸೀನ ಎಂದು ಅವನಿಂದ ಕರೆಸಿಕೊಳ್ಳುವ ಎರಡನೇ ನಾಯಕಿಯ ಪಾತ್ರ, ಪರಮಾತ್ಮನ ಸ್ನೇಹಿತೆಗೆ ಪರಮಾತ್ಮನಲ್ಲಿ ಪ್ರೇಮ ಇರುತ್ತದೆ. ಆದರೆ ನಾಯಕ ಅವಳಿಗೆ, "ನೀನು ಮಗು, ಮಕ್ಕಳನ್ನ ಮದುವೆ ಆಗಿ ಒದ್ದಾಡೋಕೆ ಆಗುತ್ತಾ?", ಎನ್ನುತ್ತಾನೆ. ಇಲ್ಲಿ ಒಂದಿಷ್ಟೂ ಧರ್ಮ ಸಂಕಟ ಅನುಭವಿಸದ ನಾಯಕ "ಅತ್ಲಾಗೆ ಆ ಹುಡುಗಿ, ಇತ್ಲಾಗೆ ಈ ಹುಡುಗಿ", ಎಂದು ತನ್ನ ಸಂಕಟ ತೋಡಿಕೊಂಡು ಕುಣಿದಾಡುವುದಕ್ಕೆ ಯಾವ ಅರ್ಥವೂ ಇಲ್ಲ.
  • ಇಡೀ ಸಿನಿಮ ನಾಯಕ ಎರಡನೆ ನಾಯಕಿಗೆ ಹೇಳುವ ಕಥೆಯ ರೂಪದಲ್ಲಿದೆ. ಕೊನೆಗೆ ಎರಡನೆ ನಾಯಕಿ ನಾಯಕನಿಗೆ ಮುತ್ತು ಕೊಡುತ್ತಾಳೆ. ನಾಯಕನ ಪುಟ್ಟ ಮಗುವಿಗೂ ಒಂದು ಮುತ್ತು ಕೊಟ್ಟು, "ನಿನ್ನ ಅಪ್ಪ ನಿನಗಿಂತ ಪಾಪು" ಎನ್ನುತ್ತಾಳೆ. "ಮಕ್ಕಳು ದೇವರ ಸಮಾನ", ಎಂದ ಮಾತ್ರಕ್ಕೆ ನಾಯಕನನ್ನು ಏಕ ಕಾಲಕ್ಕೆ ದೇವರು, ಮಗು ಎಂದೆಲ್ಲ ಕರೆದು ಪ್ರೇಕ್ಷಕ ನಂಬಬೇಕು ಎಂದುಕೊಳ್ಳುವುದು ದಡ್ಡತನ! ಮನಸ್ಸು ಸ್ವಚ್ಛ ಇರುವವನು ದೇವರಾಗುತ್ತಾನೆ, ನಿಜ. ಆದರೆ ನಮ್ಮ ನಾಯಕ ಬೇರೆಯವರ ಭಾವನೆಗಳಿಗೆ ಒಂದಿಷ್ಟು ಸ್ಪಂದಿಸದ ಕಲ್ಲು ಜೀವ. ಕೊನೆಗೆ ಇಷ್ಟ ಪಟ್ಟು ಕಟ್ಟಿಕೊಂಡ, ಸುಮ್ಮ ಸುಮ್ಮನೆ ನಗುವ ನಾಯಕಿ ಸತ್ತಾಗಲೂ ನಾಯಕ ಅಳುವುದಿಲ್ಲ. ಅವಳು ಸಂತೋಷ ಹೆಚ್ಚಾಗಿ ಸತ್ತಳು ಎಂದು ನಂಬಿಕೊಂಡು ಬದುಕುತ್ತಾನೆ. ಇದೆ ಪುನೀತ್, ಆಗ ಮಾಸ್ಟರ್ ಲೋಹಿತ್ ಆಗಿ ನಟಿಸಿದ "ಬೆಟ್ಟದ ಹೂವು" ಚಿತ್ರದ ನಾಯಕ ಮನೆಯವರಿಗಾಗಿ ತನ್ನ ಆಸೆಗಳನ್ನು ಬಲಿ ಕೊಡುತ್ತಾನೆ. ಅವನನ್ನು ಪರಮಾತ್ಮ ಎಂದರೆ ಅಡ್ಡಿಯಿಲ್ಲ. ಆದರೆ ಪರಮಾತ್ಮನಾಗುವ ಯಾವ ಅರ್ಹತೆಯೂ ಇರದ ಈ ನಾಯಕ emotional  quotient ತೀರ ಕಡಿಮೆ ಇರುವ ವ್ಯಕ್ತಿಯಾಗಿ ಕಾಣುತ್ತಾನೆ, ದೇವರಾಗಿಯಲ್ಲ!
  •   ಸಿನಿಮಾದ ಕೊನೆಯಲ್ಲಿ ನಾಯಕನಿಗೆ ತನ್ನ ಮದುವೆ ಆಮಂತ್ರಣ ಪತ್ರಿಕೆ ಕೊಡುವ ನಾಯಕಿ ಹೊರಡುತ್ತಾ, "ನಾನು ನಿನ್ನ ಬದುಕಿನಲ್ಲಿ ಮತ್ತೆ ಬರುವ ಅವಕಾಶ ಇದೆಯೇ ಎಂದು ತಿಳಿದುಕೊಳ್ಳಲು ಬಂದೆ", ಎನ್ನುತ್ತಾಳೆ. ಹಾಗಿದ್ದಲ್ಲಿ ಅವಳನ್ನು ಮದುವೆಯಾಗಲು ಹೊರಟವನು ಇನ್ನೊಬ್ಬ ಪರಮಾತ್ಮನಿರಬಹುದು!
ಕೊನೆಯ ಮಾತು: ನಾನು ಹೋದ ಥಿಯೇಟರಿನಲ್ಲಿ ಯೋಗರಾಜ್ ಭಟ್ಟರ ಮೇಲೆ, ಪುನೀತ್ ರಾಜ್ ಕುಮಾರ್ ಮೇಲೆ ನಂಬಿಕೆ ಇಟ್ಟು ಬಂದ ಜನರಿಂದಾಗಿ ಹೌಸ್-ಫುಲ್ ಆಗಿತ್ತು. ಥಿಯೇಟರ್ ಬಿಡುವಾಗ ಎಲ್ಲರು ಮಂಕಾಗಿದ್ದರು. ರಂಗಾಯಣ ರಘು ಇರುವ ಕೆಲವು ಸೀನ್ ಗಳನ್ನು ಬಿಟ್ಟರೆ ಜನರು ಮೌನವಾಗಿದ್ದರು. ನಾನು "ಪಂಚರಂಗಿ" ನೋಡಿದಾಗ ಪ್ರೇಕ್ಷಕ ಹೀಗಿರಲಿಲ್ಲ.  

Aug 20, 2011

ಲಹರಿ

ಭಾರಿ  ಆಕಾಂಕ್ಷೆಗಳಿರದ  ವಿಷಯಗಳನ್ನು  ಇಷ್ಟ ಪಡತೊಡಗಿದ್ದೇನೆ. ದೊಡ್ಡ  ಆಸೆಗಳಿರದ  ಸಿನಿಮಾಗಳು , ಕೇವಲ  ಮನರಂಜನೆಗಾಗಿ  ಸಂಯೋಜಿಸಿದ  ಹಾಡುಗಳು  ಇತ್ಯಾದಿ . ಕೈಗೆಟುಕದ  ವಿಷಯಗಳು  ಎಟುಕಿವೆ  ಎಂದು  ತೋರಿಸಿಕೊಳ್ಳುವ ಆಕಾಂಕ್ಷೆಗಳಿರದ  ಕಥೆ , ಹಾಡು , ಜಾಹಿರಾತು , ಮಾತು  - ಇವೆಲ್ಲ  ನಿಜಕ್ಕೂ  ಎಷ್ಟು  ಕಷ್ಟ  ಎಂದು ಗೊತ್ತಾಗಿದೆ . ವ್ಯರ್ಥ  ಶಬ್ದ , ಸಂಜ್ಞೆ , ಪ್ರತಿಮೆಗಳನ್ನು  ಉಪಯೋಗಿಸಿ  ಒಂದು  ರೀತಿಯ  home work ಇದ್ದರೆ  ಮಾತ್ರ  ಅರ್ಥವಾಗುವ  ಕಥನ  ಶೈಲಿ  ಭಾರಿ  ಸುಲಭ . ಇವು  ಯಾವುದು  ಇಲ್ಲದ , ಅನುಭವವನ್ನು  ಅನುಭವಿಸಿದಂತೆ , ಕಲಿತ  ಬುದ್ಧಿಯನ್ನುಪಯೋಗಿಸದೆ  ಭಾಷೆಯಲ್ಲಿ  ವಿವರಿಸುವುದು  ಎಷ್ಟು ಕಷ್ಟ! 'ಮಾತಿನಲ್ಲಿ  ಹೇಳಲಾರೆನು ' ಎನ್ನುವುದು  ಸುಲಭ. ಆದರೆ  ಮಾತಿನಲ್ಲಿ ಹೇಳಲಾಗದ್ದನ್ನು  ನಾನು  ನಿಜವಾಗಿಯೂ  ಅನುಭವಿಸಿದ್ದೇನೆ  ಎಂಬುದಕ್ಕೆ  ಸಾಕ್ಷಿ  ಏನು !

Jul 3, 2011

ಕನ್ನಡಿಗಳು

 ಅದೊಂದು ಕನಸು ಅವನಿಗೆ ಪದೇ ಪದೇ ಬೀಳುತ್ತಿತ್ತು. ಕನಸಿನಲ್ಲಿ ಅವನು ಒಂದು ಕೋಣೆಯ ನಡುವಿನಲ್ಲಿ ನಿಂತಿರುತ್ತಿದ್ದ. ಮತ್ತು ಸುತ್ತಲೂ ಅವನಿಂದ ಲೆಕ್ಕ ಮಾಡಲಿಕ್ಕೆ ಆಗದಷ್ಟು ಕನ್ನಡಿಗಳಿರುತ್ತಿದ್ದವು. ಆ ಕೋಣೆಯಲ್ಲಿ ಮತ್ತಾರೂ ಇರುತ್ತಿರಲಿಲ್ಲ. ಎತ್ತ ನೋಡಿದರೂ ಅವನದೇ ಪ್ರತಿಬಿಂಬ! ಕೆಲವು ಕನ್ನಡಿಗಳಲ್ಲಿ ಪ್ರತಿಬಿಂಬಗಳು ಮತ್ತೆ ಮತ್ತೆ ಪ್ರತಿಫಲನವಾಗಿ ವಿಚಿತ್ರವಾಗಿ ಕಾಣುತ್ತಿದ್ದವು. ಈ ವಿಚಿತ್ರ ಪ್ರತಿಫಲನದಿಂದಾಗಿ ಅವನಿಗೆ ದಿಕ್ಕೆಟ್ಟ ಭಾವ ಉಂಟಾಗುತ್ತಿತ್ತು. ಎಷ್ಟರ ಮಟ್ಟಿಗೆ ಅಂದರೆ ಅವನಿಗೆ ಅಲ್ಲಿ ತಾನು ಇರದಿದ್ದರೂ ಆ ಪ್ರತಿಬಿಂಬಗಳು ಇರುತ್ತಿದ್ದವೇನೋ ಎಂಬ ಭಾವ ಬಂದದ್ದಿದೆ. ಅವನದೇ ಪ್ರತಿಬಿಂಬ ಅವನಿರದಿದ್ದರೂ ಕನ್ನಡಿಗಳಲ್ಲಿ ಮೂಡುವ ಯೋಚನೆ ಬಂದದ್ದೇ ಅವನಿಗೆ ತಾನು ಸತ್ಯವೋ ತನ್ನ ಪ್ರತಿಬಿಂಬಗಳು ಸತ್ಯವೋ ಎಂಬ ಪ್ರಶ್ನೆ ಬಂದಿತು. ಈ ರೀತಿಯ ತತ್ವಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಬದಿಗಿಟ್ಟರೂ ಆ ಕನಸು ವಿಚಿತ್ರವಾಗಿಯೇ ಇತ್ತು. ಅಲ್ಲದೆ ಆ ಕನಸು ಮತ್ತೆ ಮತ್ತೆ ಬೀಳುವುದು ಇನ್ನೂ ವಿಚಿತ್ರವಾಗಿತ್ತು. ಈ ಕನಸಿಗೆ ಏನಾದರೂ ಅರ್ಥ ಕಲ್ಪಿಸುವುದು ಅವನ ಬುದ್ಧಿಗೆ, ಕ್ರಿಯಾಶೀಲತೆಗೆ ಮೇವು ಕೊಡುತ್ತಿತ್ತು. ಹೀಗೆಲ್ಲ ಸಣ್ಣ ಸಣ್ಣದಕ್ಕೂ ಬುದ್ಧಿವಂತಿಕೆಯ ಲೇಪ ಕೊಡುವುದು ಅವನ ದೌರ್ಬಲ್ಯ. ಅದು ಬಹುಷಃ ಅವನಿಗೆ ತಿಳಿದಿಲ್ಲ. ಯಾರಾದರೂ ಅದರ ಬಗ್ಗೆ ಹೇಳಿದರೆ ಬಹುಷಃ ಅದಕ್ಕೂ ಯಾವುದರದ್ದೋ ಲೇಪ ಕೊಟ್ಟು ಅರ್ಥ ಮಾಡಿಕೊಳ್ಳುತ್ತಾನೆ. ಹಾಗಾಗಿ ಆ ದೌರ್ಬಲ್ಯ ಅವನಲ್ಲಿ ಉಳಿದು ಬಿಡುವ ಸಾಧ್ಯತೆ ಇದೆ, ಹಾಗೂ ಸದ್ಯಕ್ಕೆ ಅದು ದೌರ್ಬಲ್ಯ ಇರಬಹುದೆಂದು ಅವನಿಗೆ ತಿಳಿದಿಲ್ಲ.

ಮತ್ತೆ ಕನಸಿನ ವಿಷಯಕ್ಕೆ ಬಂದರೆ, ಈ ರೀತಿಯ ವಿಚಿತ್ರ ಕನ್ನಡಿಗಳನ್ನು ಮೈಸೂರು ಅರಮನೆಯಲ್ಲಿ ನೋಡಿದ ನೆನಪಿದೆ ಅವನಿಗೆ. ಆದರೆ ಅಲ್ಲಿ ಒಂದು ಕನ್ನಡಿಯ ಪ್ರತಿಬಿಂಬ ಮತ್ತೊಂದಕ್ಕೆ ಬೀಳುವುದಿಲ್ಲ. ಅವನ ನೆನಪು ಸರಿಯಿದ್ದಲ್ಲಿ, ಆ ಕನ್ನಡಿಗಳಲ್ಲಿ ಒಂದರಲ್ಲಿ ಉದ್ದಕ್ಕೆ ಕಂಡರೆ, ಮತ್ತೊಂದರಲ್ಲಿ ಕುಳ್ಳಗೆ, ಇನ್ನೊಂದರಲ್ಲಿ ದಪ್ಪಗೆ - ಹೀಗೆ ವಿಚಿತ್ರವಾಗಿ ಕಾಣುತ್ತಿದ್ದವು. ಅದು ಅವನು ಚಿಕ್ಕಂದಿನಲ್ಲಿ ನೋಡಿದ್ದು. ಈಗ ಮತ್ತೆ ಅದರ ಬಗ್ಗೆ ಯೋಚಿಸಿದಾಗ, ಮನುಷ್ಯ ದೃಷ್ಟಿಯೇ ಒಂದು ರೀತಿಯ ಭ್ರಮೆ ಎಂಬ ಅನಿಸಿಕೆ ಬಂತು. 'ನನ್ನ ಕನ್ನಡಿಯಲ್ಲಿ ನಾನು ನನಗೆ ಕಾಣುವಂತೆಯೇ ಬೇರೆಯವರಿಗೂ ಕಾಣುತ್ತೇನೆಯೇ!?', ಎಂಬ ಪ್ರಶ್ನೆ ಎದ್ದಿತು. ಇಲ್ಲೂ ತತ್ವಶಾಸ್ತ್ರ ನುಸುಳಿತು. ಆದರೆ ಅದನ್ನು ಬದಿಗಿಟ್ಟರೂ, ಅವನಿಗೆ ವಿಚಿತ್ರವೆನ್ನಿಸುವ ಬೇರೆ ವಿಷಯಗಳಿವೆ. ಅವನ ಸ್ನೇಹಿತನೊಬ್ಬನ ಮೂಗು ಯಾವುದೋ ಅಪಘಾತದಿಂದಾಗಿ ಸ್ವಲ್ಪ ಸೊಟ್ಟಗೆ ಆಗಿತ್ತು. ಆದರೆ ಅವನಿಗೆ ಅದು ಗೊತ್ತಾದದ್ದು ಆ ಸ್ನೇಹಿತನ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡಿದಾಗ. ಮೊದಲ ಸಲ ಹಾಗೆ ನೋಡಿದಾಗ ಸ್ನೇಹಿತ ಏನೋ ತಮಾಷೆ ಮಾಡಲಿಕ್ಕೆ ಮೂಗು ಸೊಟ್ಟಗೆ ಮಾಡಿದ್ದಾನೆ ಅಂದುಕೊಂಡು ನಕ್ಕುಬಿಟ್ಟಿದ್ದ! ಹಾಗಿದ್ದಲ್ಲಿ ಆ ಸ್ನೇಹಿತ ತನ್ನ ಮೂಗು ಅದು 'ನಿಜಕ್ಕೂ ಇರುವುದಕ್ಕಿಂತ ಸೊಟ್ಟಗೆ ಇದೆ ಅಂದುಕೊಂಡಿರಬಹುದಲ್ಲವೇ!' ಎಂದುಕೊಂಡು ಸಣ್ಣಗೆ ಬೆಚ್ಚಿದ. ಮನುಷ್ಯ ದೃಷ್ಟಿಯ ವೈಚಿತ್ರ್ಯಗಳು ಬೇರೆಯೂ ಕೆಲವು ಇವೆಯಾದರೂ ಮತ್ತೆ ತನ್ನ ಕನಸಿನ ನೆನಪಾಗಿ ಮತ್ತೆ ಅದರ ಬಗ್ಗೆ ಯೋಚಿಸತೊಡಗಿದ.

ಈ ಕನಸಿಗೆ ಅರ್ಥ ಕಲ್ಪಿಸುವ ಕೆಲಸ ಮುಂದುವರೆಸಿದ. ಅವನ ಒಂದು ವಿವರಣೆ ಹೀಗಿದೆ : ಒಂದೊಂದು ಕನ್ನದಿಯೂ ಅವನ ಬಗ್ಗೆ ಜನರಿಗಿರುವ ಅಭಿಪ್ರಾಯವನ್ನು ಬಿಂಬಿಸುತ್ತದೆ. ಈ ವಿವರಣೆಗೆ ರಂಗೇರುವುದು ಹೀಗೆ ಕಲ್ಪಿಸಿಕೊಂಡಾಗ - ಆ ಪ್ರತಿಬಿಂಬಗಳು ಇವನ ಮೇಲೆ ಅವಲಂಬಿತವಗಿರುದಕ್ಕಿಂತಲೂ ಕನ್ನಡಿಗಳ ಕೋನ ಹಾಗೂ ಬೇರೆ ಕನ್ನಡಿಗಳ ಪ್ರತಿಬಿಂಬಗಳ ಮೇಲೆ ಅವಲಂಬಿತವಗಿರುವುದೇ ಹೆಚ್ಚು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ರೀತಿಯ ತತ್ವಜ್ಞಾನಿಯಂತೆ ಅವನು ಹೇಳುತ್ತಾನೆ - 'ನಾನಿಲ್ಲದಿದ್ದರೂ ಪ್ರತಿಬಿಂಬಗಳು ಹಾಗೆಯೇ ಇರುತ್ತವೆ. ನಾನು ಬದಲಾದರೂ ಪ್ರತಿಬಿಂಬಗಳು ಬದಲಾಗುವುದಿಲ್ಲ' 
ಇನ್ನೊಂದು ವಿವರಣೆ ಹೀಗಿದೆ : ಪ್ರತಿಯೊಂದು ಕನ್ನಡಿಯೂ ಅವನ ಬಗ್ಗೆ ಅವನಿಗೇ ಇರುವ ಅಭಿಪ್ರಾಯವನ್ನು ಪ್ರತಿನಿಧಿಸುತ್ತದೆ. ಈ ರೀತಿ ಯೋಚಿಸಿದಾಗ ಪ್ರತಿಯೊಂದು ಕನ್ನಡಿಯೂ ಅವನೊಳಗಿನ 'ನಾನು'ವನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಪ್ರತಿ 'ನಾನು'ವನ್ನು ನೋಡುವ ಕ್ರಿಯೆಯಿಂದ 'ನನ್ನ' ಬಗ್ಗೆ ನನಗಿರುವ ಅಭಿಪ್ರಾಯ ಬದಲಾಗುವ ಸಾಧ್ಯತೆ ಇದೆ. ತನ್ನ ಒಳಗನ್ನು ತಾನೆ ವಸ್ತುನಿಷ್ಥವಾಗಿ ನೋಡಿಕೊಳ್ಳುವ ಮನುಷ್ಯನಿಗೆ ಈ ಕನ್ನಡಿಗಳು ಲೆಕ್ಕವಿಲ್ಲದಷ್ಟಿರುತ್ತವೆ. ಏಕೆಂದರೆ ಪ್ರತಿಯೊಬ್ಬನ ಒಳಗೂ ಲೆಕ್ಕವಿಲ್ಲದಷ್ಟು ಸತ್ಯಗಳಿರುತ್ತವೆ! ಹಾಗಿದ್ದಲ್ಲಿ ಪ್ರತಿಯೊಂದು ಕನ್ನಡಿಯೂ ಹೋಳಾಗುತ್ತಾ ಹೋಗಬೇಕು, ಮತ್ತು ಅಸಂಖ್ಯಾತ ಸತ್ಯಗಳನ್ನು ಪ್ರತಿನಿಧಿಸುತ್ತಾ ಹೋಗಬೇಕು. ಆದರೆ ಹೋಳಾಗುತ್ತಾ ಹೋದಂತೆ ಪ್ರತಿಬಿಂಬ ಚಿಕ್ಕದಾಗುತ್ತಾ ಹೋಗಿ ಎಲ್ಲ 'ನಾನು'ಗಳೂ ಕಳೆದು ಹೋಗುವುದಿಲ್ಲವೇ!? - ಇದೊಂದು ಬೌದ್ಧಿಕ ಕಸರತ್ತು ಅವನಿಗೆ. ಅಸಲಿಗೆ ಕನಸು ಮೊದಲ ಬಾರಿ ತಾನಾಗೇ ಬಿತ್ತೆ ಅಥವಾ ಹೀಗೆಲ್ಲ ಯೋಚಿಸಲಿಕ್ಕೆ ತಾನೆ ಊಹಿಸಿ ಕನಸು ಕಂಡೆನೆ ಎಂಬುದೂ ಒಂದು ಪ್ರಶ್ನೆ ಅವನಿಗೆ!
ಹೀಗೆ ಯೋಚಿಸುತ್ತಾ ಹೋದಂತೆ ಕನಸಿಗೆ ಹೊಸ ಅರ್ಥಗಳು ಸಿಗುತ್ತಾ ಹೋದವು. ಒಂದರ ಪ್ರಕಾರ ಕನ್ನಡಿಗಳು ತನ್ನ ಅಹಂ, ಸ್ವಯಂಪ್ರತಿಷ್ಥೆಗಳನ್ನೂ ಬಿಂಬಿಸಿದರೆ, ಇನ್ನೊಂದರ ಪ್ರಕಾರ ತನ್ನೊಳಗಿನ ರಹಸ್ಯಗಳನ್ನು ಬಿಂಬಿಸಿದವು. ಮತ್ತೊಂದು ವಿವರಣೆಯಲ್ಲಿ ನಡುವೆ ನಿಂತ ತಾನು 'ಶಬ್ದ'. ಸುತ್ತಲಿದ್ದ ಕನ್ನಡಿಗಳು ಈ ಶಬ್ದದ ಧ್ವನಿಗಳು. ಹೇಗೆಂದರೆ 'ಕನ್ನಡಿ' ಎಂಬ ಒಂದೇ ಶಬ್ದ ವಿವಿಧ ಜನರಲ್ಲಿ ವಿವಿಧ ಅರ್ಥಗಳನ್ನು ಧ್ವನಿಸುವುದಿಲ್ಲವೇ? ಒಬ್ಬನಿಗೆ ಅದು ಬರಿಯ ವಸ್ತುವಾದರೆ, ಮತ್ತೊಬ್ಬನಿಗೆ ಅದು ಆತ್ಮಾವಲೋಕನದ ಪ್ರತೀಕ ಇರಬಹುದು. ಅವರವರ ಬುದ್ಧಿವಂತಿಕೆ, ಸಂಸ್ಕೃತಿಯಂತೆ ಅವರವರು ಅರ್ಥ ಕಲ್ಪಿಸಿಕೊಳ್ಳುತ್ತಾರೆ. ಒಮ್ಮೆ ಅಧ್ಯಾತ್ಮಿಕವಾಗಿ ಯೋಚಿಸಿದಾಗ ಹೀಗೂ ಅನ್ನಿಸಿತು : ನಡುವೆ ನಿಂತ ತಾನು ದೇವರಾದರೆ ಸುತ್ತಲಿದ್ದ ಕನ್ನಡಿಗಳು ಮನುಷ್ಯರು. ಎಲ್ಲ ಜೀವಿಗಳೂ ದೇವರ ಪ್ರತಿಬಿಂಬ ಎಂಬ ಚಿಂತನೆ ಬಂತು.

ಹೀಗೆ ಅವನ ಬೌದ್ಧಿಕ ಕಸರತ್ತು ಮುಂದುವರೆಯಿತು.

**                               **                                **                                 **                         **
ಮತ್ತೆ ಅದೊಂದು ರಾತ್ರಿ ಒಂದು ವಿಚಿತ್ರ ಸಂಭವಿಸಿತು. ಅವನ ಕನ್ನಡಿಗಳಿಗೆ ಯಾರೋ ಕಲ್ಲೆಸೆಯಲಾರಂಭಿಸಿದರು. ಕನ್ನಡಿಗಳು ಒಂದೊಂದಾಗಿ ಚೂರಾಗತೊಡಗಿದವು. ಪ್ರತಿಬಿಂಬಗಳು ಮಾಯವಾಗತೊದಗಿದವು. ಅವನು ಒಂದೊಂದು ಒಡೆದ ಕನ್ನಡಿಯ ಮುಂದೆಯೂ ಕುಳಿತು ದನಿ ತೆಗೆದು ಅಳತೊಡಗಿದ. ಉಳಿದ ಕನ್ನಡಿಗಳ ಪ್ರತಿಬಿಂಬಗಳೂ ಅವನೊಂದಿಗೆ ದನಿ ತೆಗೆಯದೆ ಅಳುತ್ತಿದ್ದವು. ಕೊನೆಗೊಮ್ಮೆ ಎಲ್ಲ ಕನ್ನಡಿಗಳೂ ಚೂರು ಚೂರಾದವು. ಪ್ರತಿಬಿಂಬಗಳೆಲ್ಲ ಕನ್ನಡಿಗಳೊಂದಿಗೆ ಚೂರುಚೂರಾಗಿದ್ದವು. ಇವನ ಅಳುವಿನ ದನಿ ಜೋರು ಜೋರಾಗುತ್ತಿತ್ತು. ನೋಡ ನೋಡುತ್ತಿದ್ದಂತೆ ಇವನೂ ಮಾಯವಾಗಿಬಿಟ್ಟಿದ್ದ! ಇವನ ಅಳುವೂ ತಗ್ಗಿತು. ಕೊನೆಯ ಕೆಲವು ಬಿಕ್ಕಳಿಕೆಗಳು ಸ್ವಲ್ಪ ಹೊತ್ತು ಪ್ರತಿಧ್ವನಿಸಿ ನಿಂತು ಹೋದವು.
**                             **                              **                                     **                          **
  ಈಗ ಅವನು ಕನಸುಗಳಿಗೆ ಅರ್ಥ ಹಚ್ಚುವುದನ್ನು ನಿಲ್ಲಿಸಿದ್ದಾನೆ.

Apr 26, 2011

ಸೂಪರ್

Super
ತುಂಬ ತಡವಾಗಿ "ಸೂಪರ್" ಬಗ್ಗೆ ಬರೆಯುತ್ತಿದ್ದೇನೆ. ಇಷ್ಟರಲ್ಲಿ ಎಷ್ಟೋ ಜನ ಎಷ್ಟೋ ಬರೆದಿದ್ದಾರೆ. ಹಾಗಾಗಿ ಹೆಚ್ಚು ವಿವರಗಳಿಗೆ ಹೋಗದೆ ಮೇಲ್ನೋಟಕ್ಕೆ ಕಾಣಿಸದ ಕೆಲವು ವಿಷಯಗಳ ಬಗ್ಗೆ ಬರೆಯುತ್ತೇನೆ. ಈ ಸಿನಿಮ ತುಂಬ "ಗದ್ದಲಮಯ"ವಾಗಿರುವುದರಿಂದ ಇದರ ನಿಜವಾದ ಸಂದೇಶ ನಮಗೆ ಕಾಣಿಸದೆ ಹೋಗುವ ಸಾಧ್ಯತೆ ಇದೆ. ಚಿತ್ರದ "ಪ್ರೋಮೋ" ಗಳು ಕೂಡ ಸಂದೇಶದ ಸುಳಿವು ಕೊಡುವುದಿಲ್ಲ. ಹಾಡುಗಳು ಕೂಡ "ಗದ್ದಲಮಯ" ವಾಗಿರುವುದರಿಂದ ಅಲ್ಲೂ ಕಥೆಯ ಸುಳಿವು ಸಿಗುವುದಿಲ್ಲ.
ನನ್ನ ಪ್ರಕಾರ ಈ ಸಿನಿಮ ಉಪೇಂದ್ರರವರ ಸಾಮಾಜಿಕ ಕಳಕಳಿಯ ಫಲ. ಭಾರತೀಯ ಸಂಸ್ಕೃತಿಯ ಬಗ್ಗೆ ಬಹಳ ಅಭಿಮಾನ ಹೊಂದಿರುವ ನಾವು ಭಾರತೀಯರು ಇದೇ ಮರುಳು ದುರಭಿಮಾನದಲ್ಲಿ ಮುಳುಗಿ ಹೋಗಿ ನಿಷ್ಕ್ರಿಯರಾಗಿದ್ದೇವೆ ಎಂಬುದೇ ಈ ಚಿತ್ರದ ಮೊದಲ ಸಂದೇಶ. ಎರಡನೆಯದಾಗಿ ನಮ್ಮ ದೇಶದ ದುಃಸ್ಥಿತಿಗೆ ಒಂದು ಪರಿಹಾರವನ್ನು ಸೂಚಿಸುತ್ತದೆ. ಪರಿಹಾರ ಕೊಂಚ ಉತ್ಪ್ರೇಕ್ಷೆ ಅನ್ನಿಸಬಹುದಾದರೂ, ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡರೆ "workable" ಅನ್ನಿಸುತ್ತದೆ. ಪರಿಹಾರ ಇಷ್ಟೇ : "ಇದು ನನ್ನ ದೇಶ. ಇದರ ಉನ್ನತಿಗೆ ಮತ್ತು ಅವನತಿಗೆ ನಾನು ಜವಾಬ್ದಾರ." ಎಂದು ಪ್ರತಿಯೊಬ್ಬ ಭಾರತೀಯನಿಗೂ ಮನವರಿಕೆಯಾಗಬೇಕು. 
ಈ ಸಂದೇಶಗಳನ್ನು ಜನರಿಗೆ ಮುಟ್ಟಿಸಲಿಕ್ಕೆ ಒಂದು ಪ್ರೇಮ ಕಥೆಯನ್ನು ಹೆಣೆದಿದ್ದಾರೆ ಉಪೇಂದ್ರ. ಪಕ್ಕಾ ಮಸಾಲೆಭರಿತ ಕಥೆಯ ಮೂಲಕ ಒಂದು ಉತ್ತಮ ಸಂದೇಶ ಹೇಳ ಹೊರಟ ಕಥೆಗಾರ ಉಪೇಂದ್ರ ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಅನ್ನಬಹುದು. 

ಇದು ಈ ಸಿನಿಮಾದ ಕುರಿತು. ಇದಲ್ಲದೆ ಕೆಲವು ವಿಷಯಗಳು ತಲೆಗೆ ಬಂದವು :
೧. ಒಂದು ಕಾಲದಲ್ಲಿ "ನಾನು" ಎಂಬ concept ಅನ್ನು ಸಿನಿಮಾದಲ್ಲಿ ಹೇಳಿದ್ದ ಉಪೇಂದ್ರ ಇಂದು ಒಂದು ಸಾಮಾಜಿಕ ಕಳಕಳಿ ಉಳ್ಳ ಚಿತ್ರವನ್ನು ಮಾಡಿದ್ದಾರೆ. "ನಾನು" ಎಂಬುದರ ಪರಿಧಿಯನ್ನು ವಿಸ್ತರಿಸಿಕೊಂಡಿದ್ದಾರೋ ಏನೋ? ಅಥವಾ ರಾಜಕೀಯಕ್ಕೆ ಇಳಿಯಲು ಮಾಡಿಕೊಂಡ "home work " ಇದ್ದರೂ ಇರಬಹುದು!
೨. ಯೋಗರಾಜ ಭಟ್ ಮತ್ತೆ ತಮ್ಮ ದನಿಯನ್ನು ಉಪಯೋಗಿಸಿದ್ದಾರೆ ಇಲ್ಲಿ. ಅವರು ಈ ಸಿನಿಮಾದ narrator . ಒಂದು ಹಾಡನ್ನು ಕೂಡ ಬರೆದಿದ್ದಾರೆ ಅನ್ನಿಸುತ್ತದೆ. ಬಹುಷಃ ಕನ್ನಡದ ನಿರ್ದೇಶಕರು ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಸಹಕರಿಸಲಿಕ್ಕೆ ಶುರು ಮಾಡಿದ್ದಾರೆ ಅನಿಸುತ್ತದೆ. ಇದು ನಿಜ ಇದ್ದಲ್ಲಿ, ಇದು ಒಂದು ಆರೋಗ್ಯಕರ ಬೆಳವಣಿಗೆ.
೩. ಉಪೇಂದ್ರ ಖಾಲಿಯಾಗಿದ್ದಾರೆ ಅನಿಸುತ್ತದೆ. ಈ ಅನಿಸಿಕೆಗೆ ಬಲವಾದ ಕಾರಣ ಯಾವುದೂ ಇಲ್ಲ. ಆದರೂ ಯಾಕೋ ಹಾಗೆ ಅನ್ನಿಸಿತು. 
   

Nothing


Urinate here if you are an S.O.B

Dogs, pigs and S.O.Bs urinate here

Every trick has been tried - from putting pictures of Gods and Goddesses to insulting the culture and character of the person urinating in public; but people have not stopped urinating on the walls. In humans, urinating in public has nothing to do with the territorial display. It is only lack of public toilets that results in people urinating on the walls. And some don't like spending money on emptying their bladders (when they can do it the easy way - on walls of public buildings), and hence don't use the "pay and use" toilets.

Whatever the reason for people urinating in public, it is quite evident that insulting one's character will not stop him from doing it. This is a guilt induction mechanism, and will not work. I don't know what else will work, though. Probably a very stringent law might work. But it is bound to fail in India, as is the case with any other law. I have a very weird and violent idea - the one that was used by Amir Khan in the opening scene of "3 Idiots". But this will affect the street dogs. The idea can be improvised so that only humans will suffer. I know how weird it sounds. But I think only a shock treatment can correct the citizens of this country. 

Apr 13, 2011

A Reminder to Myself

This is just a reminder to myself for writing something. I will post something more meaningful than this one in a week.