ಸುನೀಲನಿಗೆ ಎರಡನೇ ಇಯತ್ತೆಯಿಂದಲೇ ವರ್ಷಕ್ಕೊಬ್ಬ ಹುಡುಗಿಯ ಮೇಲೆ ದೈವಿಕ ಪ್ರೇಮ ಹುಟ್ಟುತ್ತಲೇ ಇತ್ತು. ತರಗತಿಯಲ್ಲಿ ಇದ್ದುದರಲ್ಲಿ ಚೆಂದದ ಹುಡುಗಿಯರಲ್ಲಿ ವಿಪರೀತ ಪ್ರೇಮ ಉಕ್ಕಿ ಅದೇ ಪ್ರೀತಿಯ ಬೆಳಕಿನಲ್ಲಿ ಪ್ರತಿ ವರ್ಷದ ಓದು ಮುಗಿಸಿ ಉತ್ತೀರ್ಣನಾಗುತ್ತಿದ್ದ. ಈ ಪ್ರೀತಿಗೆ ಜಾತಿ ಮತಗಳ ಭೇದವಿರಲಿಲ್ಲ. ಕೆಲವೊಮ್ಮೆ ಒಂದೇ ಹುಡುಗಿಯಲ್ಲಿ ಎರಡು ಮೂರು ವರ್ಷಗಳವರೆಗೆ ಪ್ರೇಮ ಮುಂದುವರೆದದ್ದಿದೆ. ಆದರೆ ಪ್ರೇಮದ ಅಭಿವ್ಯಕ್ತಿ ಯಾವತ್ತೂ ಆಗಿರಲಿಲ್ಲ. ಒಂದು ಕಳ್ಳ ನೋಟ, ಒಂದು ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದ ಮುಗುಳ್ನಗು ಇಷ್ಟರಲ್ಲೇ ಸುಖ ಕಾಣುತ್ತಿದ್ದ. ಬದಲಿಗೆ ಏನನ್ನೂ ಬಯಸದ ತನ್ನ ಈ ಪ್ರೇಮದ ಬಗ್ಗೆ ಮತ್ತು ಈಗೀಗ ಲೆಕ್ಕ ತಪ್ಪತೊಡಗಿದ್ದ ಪ್ರೇಮ ಕನ್ನಿಕೆಯರ ಬಗ್ಗೆ ಅವನಿಗೆ ಒಂದು ಅಭಿಮಾನ. ಇತ್ತಿತ್ತಲಾಗಿ ಹುಡುಗಿಯರು ನಿಶ್ಚಿತಾರ್ಥ, ಮದುವೆಗಳಿಗೆ ಇನ್ವೈಟ್ ಮಾಡಲಿಕ್ಕೆ ಮಾತ್ರ ತನಗೆ ಕಾಲ್ ಮಾಡುತ್ತಾರೆ ಎಂಬ ಸತ್ಯದ ಅರಿವೂ ಅವನಿಗಿದೆ. ಇದೇ ಅರಿವಿನ ಬೆಳಕಿನಲ್ಲಿ ಹೊಸತೊಂದು ಪ್ರೇಮವನ್ನು ಕಟ್ಟಿಕೊಂಡು ಬದುಕುತ್ತಿದ್ದಾನೆ.
ಕಾಲೇಜು ಮುಗಿಸಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ನೌಕರಿ ಸಿಕ್ಕ ನಂತರ ಆಫೀಸಿನ ಹುಡುಗಿಯರು ಅಪೀಲ್ ಆಗದೆ ಇದ್ದಾಗ ತಿಂಗಳುಗಟ್ಟಲೆ ನರಳಿದ್ದ. ಎಲ್ಲ ಹುಡುಗಿಯರು ಒಂದೇ ಕಾರ್ಖಾನೆಯಲ್ಲಿ ತಯಾರಾಗಿ ಬಂದ ಗೊಂಬೆಗಳಂತೆ ಕಂಡರು. ಕತ್ತು ಕೊಂಕಿಸಿ, ಹುಬ್ಬು ಕುಣಿಸಿ, ಬಾಯಗಲಿಸಿ ಮಾತನಾಡುವ ಈ ಹುಡುಗಿಯರಲ್ಲಿ ತನಗಾಗಲಿ, ತನ್ನಲ್ಲಿ ಅವರಿಗಾಗಲಿ ಏನೂ ಇಲ್ಲ ಎಂದೆನಿಸಿತ್ತು. ಆದರೂ ನಿತ್ಯ ಪ್ರೇಮಿ ಸುನೀಲ ಇದ್ದುದರಲ್ಲೇ ಕೊಂಚ ಅಪೀಲಾದ ಹುಡುಗಿಯನ್ನು ಪ್ರೇಮಿಸತೊಡಗಿದ. ಈಗ ತಾನೇ ಸಿಕ್ಕ ನೌಕರಿಯ ಬಲ ಇದ್ದುದರಿಂದ, ಪ್ರೇಮವನ್ನು ಮಾತುಗಳಲ್ಲಿ ವ್ಯಕ್ತಪಡಿಸುವ ಕಾಲ ಬಂದಿದೆ ಎಂದುಕೊಂಡ. ಅಲ್ಲದೇ ಈ ಪಟ್ಟಣದ ಹುಡುಗಿಯರಿಗೆ ಕಳ್ಳ ನೋಟ, ಮುಗುಳ್ನಗುಗಳನ್ನು ಗ್ರಹಿಸುವ ಸೂಕ್ಷ್ಮ ಇಲ್ಲ ಎಂದೂ ಅನಿಸಿತ್ತು. ಆದರೆ ಮಾತಿಗಿಳಿಸಿದರೆ ತನ್ನ ಪ್ರೇಮದ ಪಾವಿತ್ರ್ಯ ಎಲ್ಲಿ ಕಡಿಮೆಯಾಗುತ್ತದೋ ಎಂದು ಭಯವಾಯಿತು. ರಸ್ತೆ ಬದಿಯಲ್ಲಿ ಲೆದರ್ ಪರ್ಸ್ ಮಾರುವವನಂತೆ ತನ್ನ ಪ್ರೇಮದ ಉತ್ಕೃಷ್ಟತೆ, ಅದರ ಬೆಲೆಯನ್ನು ಮತ್ತೊಬ್ಬರಿಗೆ ಮನವರಿಕೆ ಮಾಡಿಸಬೇಕಾಗುವ ಸನ್ನಿವೇಶದ ಕಲ್ಪನೆಯೇ ಸಹ್ಯವಾಗಲಿಲ್ಲ ಅವನಿಗೆ. ಹೀಗಾಗಿ ತನ್ನ ಪ್ರೇಮ ಕನ್ನಿಕೆಯರೆಲ್ಲ ಬೇರೆ ಯಾರ ಯಾರೊಂದಿಗೋ ಜೋಡಿಯಾಗಿ, ಮದುವೆಯಾಗಿ, ಕೊನೆಗೆ ಮಕ್ಕಳನ್ನೂ ಹೆತ್ತು ಓಡಾಡುವುದನ್ನು ನಿರ್ಲಿಪ್ತನಾಗಿ ನೋಡುತ್ತ ಉಳಿದ ಅಮರ ಪ್ರೇಮಿ ಸುನೀಲ.
ಕೆಲವು ಸ್ನೇಹಿತರು ಇವನ ಈ ನೋವನ್ನು ಹಂಚಿಕೊಳ್ಳುವವರಿದ್ದರು. ಅವರೂ ಕೂಡ ನೋಡ ನೋಡುತ್ತಲೇ ತಮ್ಮ ಕನಸಿನ ಕನ್ನಿಕೆಯರು ಪರರ ಪಾಲಾಗುವುದನ್ನು ಕಂಡು ಹೊಟ್ಟೆ ಉರಿದುಕೊಂಡವರು. ಮತ್ತೆ ಹೊಸ ಪ್ರೇಮವನ್ನು ಹೊದ್ದುಕೊಂಡು ಮಲಗಿ ಮುಂಜಾನೆ ಎದ್ದು ಕೆರಿಯರು, ಪ್ರೋಫೆಷನ್ನು, ಪೇ ಸ್ಲಿಪ್ಪು, ಟ್ಯಾಕ್ಸ್, ಸೇವಿಂಗ್ಸು ಗಳ ಪ್ರಪಂಚದಲ್ಲಿ ಕುಂಡೆ ತುರಿಸಿಕೊಳ್ಳಲಿಕ್ಕೂ ಪುರುಸೊತ್ತಿಲ್ಲದೆ ಓಡಾಡುವವರು. ಸುನೀಲನಿಗೆ ಈ ರೀತಿ ಪೊರೆಗಳಚುವುದು ಸುಲಭವಿರಲಿಲ್ಲ. ಅವನು ಕೆರಿಯರು, ಪ್ರೊಫೆಶನ್ನುಗಳ ಚಾದರ ಹೊದ್ದುಕೊಳ್ಳಲಾಗದೆ ಒದ್ದಾಡುತ್ತಾನೆ. ಕೆಲವೊಮ್ಮೆ ಈ ಚಿಂತೆಗಳು ತನ್ನನ್ನೇಕೆ ಕಾಡುವುದಿಲ್ಲ ಎಂಬುದೇ ಚಿಂತೆಯಾಗಿ ಕಾಡುತ್ತದೆ ಅವನನ್ನು. ತನಗೇಕೆ ಹೆಚ್ಚು ಸಂಬಳ ಬೇಕು ಎಂದೆನಿಸುವುದಿಲ್ಲ? ತನಗೇಕೆ ಕೆರಿಯರ್ ಗ್ರೋತು ಬೇಕು ಎಂದೆನಿಸುವುದಿಲ್ಲ? ಒದ್ದಾಡುತ್ತಾನೆ.
-ಹೀಗೆ ಒದ್ದಾಡುತ್ತಿದ್ದ ಸುನೀಲನ ಬದುಕಿಗೆ ತಂಗಾಳಿಯಂತೆ ನಡೆದು ಬಂದವಳು ಗೀತಾಂಜಲಿ. ತಿಳಿನಗೆ ಬೀರುತ್ತ, ನಿರ್ಭಯ ಮಗುವಿನಂತೆ ಬಡಬಡಿಸುತ್ತ, ದಾಡಿ ಬೆಳೆಸಿಕೊಂಡ ಸುನೀಲನನ್ನು 'ಕಾಡು ಮನುಷ್ಯ' ಎಂದು ಛೇಡಿಸುತ್ತ, 'ಕೆಕ್ಕೆಕ್ಕೆ' ಎಂದು ಹಲ್ಕಿರಿಯುತ್ತ ಸುನೀಲನಿಗೇ ತಿಳಿಯದಂತೆ ಹತ್ತಿರವಾದಳು. ಇದು ನಿಜವಾದ ಪ್ರೇಮ ಎಂದನ್ನಿಸಿತು ಸುನೀಲನಿಗೆ. ಆದರೆ ಹಿಂದೆಯೂ ಲೆಕ್ಕವಿಲ್ಲದಷ್ಟು ಬಾರಿ ಇದೇ ರೀತಿ ಅನ್ನಿಸಿದ್ದರಿಂದ ಮರುಕ್ಷಣ ಅಧೀರನಾದ. ಆದರೂ, ಅವಳು ಆಫೀಸು ಬಿಡುವ ವೇಳೆಗೆ ಕಾದು, ತಾನೂ ಅವಳು ಹತ್ತಿದ ಬಸ್ಸನ್ನೇ ಹತ್ತಿ ಸ್ಪಷ್ಟ ಸಂದೇಶಗಳನ್ನು ರವಾನಿಸಿದ. ಅವಳೂ ಕೂಡ ತಿಳಿದಂತೆ ನಡೆದಳು. ಸುನೀಲನ ನಿರ್ಧಾರ ಬಲವಾಯಿತು. ಒಮ್ಮೆ ವೀಕೆಂಡ್ ಊಟಕ್ಕೆ ಕರೆದ. ತಕರಾರಿಲ್ಲದೆ ಒಪ್ಪಿಕೊಂಡ ಅವಳು ಜೊತೆಗೆ ಗೆಳತಿಯನ್ನು ಕರೆ ತಂದಾಗ ಸುನೀಲ ತುಸು ಬೇಸರಿಸಿದರೂ, 'ಬಂದಳಲ್ಲ', ಎಂದು ಸಮಾಧಾನ ಪಟ್ಟುಕೊಂಡ. ಮುಂದಿನ ತಿಂಗಳಲ್ಲಿ ಥೇಟರಿನಲ್ಲಿ 'ಜಾನೆ ತೂ ಯಾ ಜಾನೆ ನಾ' ನೋಡಿದರು. ಮತ್ತೆ ಕೆಫೆ ಕಾಫಿ ಡೇನಲ್ಲಿ ಜೊತೆಯಾಗಿ ತಣ್ಣನೆ ಕಾಫಿ ಕುಡಿದರು. ರಸ್ತೆ ದಾಟುವಾಗ ಕೈ ಹಿಡಿದುಕೊಂಡರು. ಆಫೀಸ್ ಕೆಫೆಟೀರಿಯಾ ದಲ್ಲಿ ಹರಟುತ್ತ ಭೇಲ್ ಪುರಿ ತಿನ್ನುವುದು ಮಾಮೂಲಿಯಾಯಿತು.
ಕೊನೆಗೊಂದು ದಿವಸ ಈ ಪ್ರೇಮಗೀತೆ ಸುನೀಲನಿಗೆ ಕರೆ ಹಚ್ಚಿ, " ಬರುವ ಭಾನುವಾರ ನನ್ನ ಎಂಗೇಜಮೆಂಟ್.", ಎಂದಳು! ಸುನೀಲ , "ಏನರ್ಥ ಇದಕ್ಕೆ?", ಎಂದ. "ಏನೂ ಕೇಳಬೇಡ.", ಎಂದು ಅಳುತ್ತ ಫೋನ್ ಕಟ್ ಮಾಡಿದಳು. ಸುನೀಲನಿಗೆ ಅವಳ ಗೆಳತಿಯರಿಂದ ತಿಳಿದು ಬಂದದ್ದಿಷ್ಟು: ಅವಳ ತಂದೆಯದ್ದು ಏನೋ ಬಿಸಿನೆಸ್ ಇತ್ತಂತೆ. ಅದು ನಷ್ಟವಾಗಿ ತಂದೆ ಕೈ ಸುಟ್ಟುಕೊಂಡು, ಹೃದಯಾಘಾತವಾದಾಗ, ಅವರ ಸ್ನೇಹಿತರೊಬ್ಬರು ಸಹಾಯ ಮಾಡಿದರು. ಬದಲಿಗೆ ತಮ್ಮ ಮಗನಿಗೆ ಗೀತಾಂಜಲಿಯನ್ನು ಕೇಳಿದರು. ಗೀತಾಂಜಲಿ ಅಪ್ಪನಿಗೋಸ್ಕರ ಒಪ್ಪಿಕೊಳ್ಳಬೇಕಾಯಿತು.
ಸುನೀಲ ಮಾತಿಲ್ಲದೆ ಅವಳ ಮದುವೆಗೆ ಹಾಜರಿ ಹಾಕಿ, ಮತ್ತೊಂದು ಪುಸ್ತಕ ಓದಿ ಮುಗಿಸಿದವನಂತೆ ಮುಂದೆ .
ಮತ್ತೆ ಹೊಸ ಪ್ರೇಮಕ್ಕೆ ಸಮಯವಾಗಿತ್ತು. ಆದರೆ ಸುನೀಲನಿಗೆ ಹಿಂದಿದ್ದ ಆಸಕ್ತಿ ಇದ್ದಂತಿರಲಿಲ್ಲ. ತನಗಿರುವುದು ನಿಜಕ್ಕೂ ಪ್ರೇಮವೇ ಎಂಬ ಪ್ರಶ್ನೆ ಕಾಡತೊಡಗಿತ್ತು. ಅಥವಾ ಬರಿಯ ಕಾಮನೆಯೇ? ಕೆಲವೊಮ್ಮೆ ಕಾಮನೆ ಒತ್ತಿ ಬಂದಾಗ 'ಸೆಲ್ಫ್ ಹೆಲ್ಪ್' ಗೆ ತೊಡಗಿಕೊಂಂಡಾಗ ಹಿಂದಿನ ದಿನ ನೋಡಿದ ಪೋಲಿ ಚಿತ್ರದ ಹೀರೋಯಿನ್ನುಗಳಷ್ಟೇ ಕಣ್ಣ ಮುಂದೆ ನಿಲ್ಲುತ್ತಿದ್ದರು. ತನ್ನ ಅಸಂಖ್ಯ ಕನಸಿನ ಕನ್ಯೆಗಳಲ್ಲಿ ಒಬ್ಬರ ಮುಖವೂ ಆ ಕ್ಷಣದಲ್ಲಿ ನೆನಪಾಗುವುದಿಲ್ಲ! ಹೆಚ್ಚು ಗೋಜಲು ಮಾಡಿಕೊಳ್ಳದೆ ಪ್ರಶ್ನೆಯನ್ನು ಮರೆಯಲು ಯತ್ನಿಸುತ್ತಾನೆ ಆತ.
ಇವನ ಪ್ರೇಮ ಕಥೆಯ ಪರಿವೆಯೇ ಇಲ್ಲದೆ ಪ್ರಪಂಚ ಮುಂದೆ ಸಾಗಿತ್ತು. ಆಗಲೇ ಸುನೀಲ ಈ ಪಟ್ಟಣಕ್ಕೆ ಎರಡು ವರ್ಷ ಹಳಬನಾಗಿ ಬಿಟ್ಟಿದ್ದ. ದೂರದೂರಿನಲ್ಲಿ ತನ್ನ ಮನೆ ಇದೆ, ಇಲ್ಲಿರುವುದು ಬರಿ ಹೊಟ್ಟೆ ಹೊರೆಯಲಿಕ್ಕಾಗಿ ಎಂಬ ಟೆಂಪರರಿ ಭಾವವೇ ಶಾಶ್ವತವಾಗಿಬಿಟ್ಟಿತ್ತು. ತಾನೂ ಕೂಡ ಯಾರನ್ನೋ ಮದುವೆಯಾಗಿ, ಮನೆ ಮಾಡಿ, ದಿನಸಿ, ತರಕಾರಿ, ಪ್ರೆಶರ್ ಕುಕ್ಕರ್, ಟೀವಿ, ಸೀರಿಯಲ್ಲೂ, ನ್ಯೂಸ್ ಪೇಪರು ಗಳ ಪ್ರಪಂಚ ಹೊಕ್ಕು ಕಾಲ್ಪನಿಕ 'ಪರ್ಫೆಕ್ಟ್' ಮನುಷ್ಯರಿಂದ 'ಸೆಟಲ್ ಆದ' ಎಂಬ ಅಚ್ಚೊತ್ತಿಸಿಕೊಳ್ಳಬೇಕಾಗುತ್ತದೆ ಶೀಘ್ರದಲ್ಲೇ ಎಂಬ ಭಯ ಮನಸಿನ ಮೂಲೆಯಲ್ಲಿತ್ತು. ಈ ಸತ್ಯದಿಂದ ಆದಷ್ಟು ದೂರ ಓಡುವ ಮನಸ್ಸಾಗುತ್ತದೆ. ಸ್ನೇಹಿತರೆಲ್ಲ ಕೂಡಿದಾಗ, "ಯಾವಾಗ ಮದುವೆ?", ಎಂದು ಕೇಳತೊಡಗಿದ್ದರು, ಅದೊಂದು ಶಾಶ್ವತ ಸತ್ಯ ಎಂಬಂತೆ. "ಅಕ್ಕನ ಮದುವೆ ಆದ ಮೇಲೆ. ಇನ್ನೂ ಟೈಮ್ ಇದೆ.", ಎಂಬ ಉತ್ತರ ಕೊಡುತ್ತಾ ಅದನ್ನೇ ನಂಬತೊಡಗಿದ್ದ ಸುನೀಲ. ಎಲ್ಲಿಯ ತಾನು? ಎಲ್ಲಿಯ ಮದುವೆ? ನಿದ್ದೆ ಬರುವುದಿಲ್ಲ ಸುನೀಲನಿಗೆ. ಕಳ್ಳ ನೋಟ, ಮುಗುಳ್ನಗು ಎಲ್ಲಿಯವರೆಗೆ? ಕೊನೆಗೊಮ್ಮೆ ಎಲ್ಲ ಸ್ಪಷ್ಟ ಆಗಲೇಬೇಕು. ಸಂಬಂಧಕ್ಕೊಂದು ಹೆಸರು, ಅದಕ್ಕೊಂದು ಮುದ್ರೆ, ಫಿನಾಯಿಲ್ ಹಾಕಿ ತೊಳೆದ ನೆಲದಂತೆ ಎಲ್ಲ ಸ್ಪಷ್ಟವಾಗಬೇಕು. ಪ್ರೇಮವೋ, ಅಲ್ಲವೋ, ಮುದ್ರೆಯೊತ್ತಿಸಿಕೊಂಡು ಗೋಡೆಗಳೊಳಗೆ ಬದುಕು ನಡೆಸಬೇಕು. ಯಾಕೋ ಮದುವೆ ಎಂಬುದು ತನ್ನ ಪ್ರಪಂಚವನ್ನು ಸಣ್ಣದು ಮಾಡಲಿಕ್ಕೆ ಬರುತ್ತಿರುವ ಭೂತದಂತೆ ಕಂಡಿತು ಸುನೀಲನಿಗೆ. ಅನಂತ ಸಾಧ್ಯತೆಗಳನ್ನು ಇಲ್ಲವಾಗಿಸಿ, "ಇವಳಷ್ಟೇ ನಿನಗೆ. ನೀನು ಅವಳಿಗೆ. ನಿಮ್ಮಿಬ್ಬರ ಸುಖ ದುಃಖಗಳು ನಿಮಗಷ್ಟೇ.", ಎಂದು ಮುದ್ರೆಯೊತ್ತುವ ವ್ಯವಸ್ಥೆ! ಸುನೀಲ ನಿದ್ದೆ ಬರದೆ ಹೊರಳಾಡಿದ.
* * * * * *
ಹೀಗಿರುವಾಗ ಸುನೀಲನ ಆಫೀಸಿನಿಂದ ಅವನನ್ನು ವಿದೇಶಕ್ಕೆಕಳಿಸುವ ಸಂದರ್ಭ ಒದಗಿತು. ಮತ್ತೆ ವೀಸಾ, ಸ್ಟ್ಯಾಂಪಿಂಗು, ಇಂಟರ್ ವ್ಯೂ ಎಂಬ ತಲೆನೋವುಗನ್ನು ಗೆದ್ದು ಕೊನೆಗೊಮ್ಮೆವಿದೇಶಕ್ಕೆ ಹಾರಿಯೇ ಬಿಟ್ಟ ಸುನೀಲ. ಅಲ್ಲಿ ಬಣ್ಣದ ಮನುಷ್ಯರ ನಡುವೆ ಅದಕ್ಕೆಲ್ಲ ಸಂಬಂಧ ಪಡದವನಂತೆ ನಡೆದಾಡಿದ. ಜೊತೆಗೆ ಬಂದಿದ್ದ ರಾಹುಲ ಎಂಬ ಸಹೋದ್ಯೋಗಿಯೊಡನೆ ಅಲ್ಲಿ ಇಲ್ಲಿ ಸುತ್ತಾಡಿದ. ಇಬ್ಬರೂ ದೊಡ್ಡ ದೊಡ್ಡ ರೆಸ್ಟುರಾಗಳಲ್ಲಿ ಉಂಡರು, ಬಾರುಗಳಲ್ಲಿ ಕುಡಿದರು. ಸಕಲವನ್ನೂ ಸ್ಪಷ್ಟವಾಗಿ ತೋರಿಸುವ ಸ್ಟ್ರಿಪ್ ಕ್ಲಬ್ ಗಳಲ್ಲಿ ಹೆಣ್ಣು ದೇಹಗಳನ್ನು ಊಟಕ್ಕಿಟ್ಟ ಪದಾರ್ಥದಂತೆ ನೋಡಿದರು. ಬಿಳಿಚರ್ಮದ ಬಾಲೆಯರನ್ನು ದಿಟ್ಟಿಸಿದರು. ಸ್ವದೇಶದಲ್ಲಿ ಸಿಕ್ಕದ್ದು ಏನೋ ಇಲ್ಲಿ ಸಿಕ್ಕಬಹುದು ಎಂದು ಆಶೆಯಿಂದ ಹುಡುಕಾಡಿದರು, ಏನನ್ನು ಹುದುಕುತ್ತಿರುವೆವು ಎಂಬುದು ಗೊತ್ತೇ ಇಲ್ಲದೆ. ಇಷ್ಟೆಲ್ಲಾ ಮಾಡಿದವರು ಕೊನೆಗೆ 'ಅಲ್ಲಿಗೂ' ಹೋದರು. ಸುನೀಲ ರಾಹುಲರು, 'ಅವಳು ನಿನಗೆ, ಇವಳು ನನಗೆ' ಎಂದು ಕಣ್ಣಿನಲ್ಲೇ ಮಾತಾಡಿಕೊಂಡು ತಮ್ಮ ತಮ್ಮ ಹುಡುಗಿಯರೊಂದಿಗೆ ಕೋಣೆ ಹೊಕ್ಕರು.
ಸುನೀಲನ ಹುಡುಗಿ ಉದ್ದಕ್ಕಿದ್ದಳು. ಅವಳಿಗೆ ಇಂಗ್ಲೀಷು ಬರುತ್ತಿರಲಿಲ್ಲ, ಸ್ಪ್ಯಾನಿಶ್ ಮಾತಾಡುವವಳಿರಬೇಕು. ಅವಳ ಕಂಗಳು ಸುನೀಲನನ್ನು ಸೆಳೆದವು.ಎಲ್ಲ ಮುಗಿಸಿ ತಾವು ತಂಗಿದ್ದ ಸ್ಥಳಕ್ಕೆ ಬಂದ ರಾಹುಲ ಸುನೀಲರು ಒಬ್ಬರನ್ನೊಬ್ಬರು ನೋಡಿಕೊಂಡು ಮುಗುಳ್ನಕ್ಕರು. ಸುನೀಲ ಮತ್ತೆ ಪ್ರೇಮದಲ್ಲಿ ಬಿದ್ದಿದ್ದ, ಈ ಬಾರಿ ಪರದೇಶದಲ್ಲಿ, ಅದೂ 'ಅಂಥ' ಹೆಂಗಸಿನೊಡನೆ. ರಾಹುಲ್ ಪಕಪಕನೆ ನಗೆಯಾಡಿದ. ಸುನೀಲ ಸುಮ್ಮನಾದ. ಕಾಲ, ದೇಶ, ವೃತ್ತಿಗಳನ್ನು ಗಣನೆಗೆ ತೆಗೆದುಕೊಂಡು ಹುಟ್ಟುವುದಾದರೆ ಅದು ಪ್ರೀತಿ ಹೇಗಾಗುತ್ತದೆ? ಎಂದುಕೊಂಡ. ಅವಳ ಕಂಗಳು ಏನೇನೋ ಹೇಳಿದಂತೆ, ತಾನು ಇಂಗ್ಲೀಷಿನಲ್ಲಿ ಬಡಬಡಿಸಿದ್ದೆಲ್ಲ ಅವಳಿಗೆ ಅರ್ಥವಾದಂತೆ ಅನ್ನಿಸಿ ಖುಷಿಪಟ್ಟ.
ಮತ್ತೆ ಮುಂದಿನ ವಾರ ಅದೇ ಸ್ಥಳಕ್ಕೆ ಹೋಗಿ ಅವಳೇ ಬೇಕೆಂದು ಹುಡುಕಿದ ಸುನೀಲ. ಅವಳು ಸಿಗಲಿಲ್ಲ. ಮತ್ತೆ ಕಾನ್ಫರೆನ್ಸು, ಪ್ರೆಸೆಂಟೇಷನ್ನು, ಮೀಟಿಂಗುಗಳಲ್ಲಿ ಒಂದು ವಾರ ಕಳೆದ ನಂತರ ವೀಕೆಂಡ್ ಬಂತು. ಸುನೀಲ ಮತ್ತೊಮ್ಮೆ ಅವಳನ್ನು ಹುಡುಕಿದ. ಈ ಬಾರಿ ಸಿಕ್ಕಿದಳು. ಕೋಣೆ ಹೊಕ್ಕವನು ಸುಮ್ಮನ ಅವಳ ಹೊಟ್ಟೆ ತಡವುತ್ತಾ ಗಂಟೆ ಹೊತ್ತು ಕಳೆದ. "ಐ ಲವ್ ಯೂ.", ಎಂದ. ಅವಳು, "ಮೇಕ್ ಲವ್ ಟು ಮೀ.", ಎಂದು ಬಿಟ್ಟಳು. ಅಷ್ಟು ಮಾತ್ರದ ಇಂಗ್ಲೀಷು ಎಲ್ಲರಿಗೂ ಬರುತ್ತದೆ ಎಂದುಕೊಂಡು ಒಳಗೇ ನಕ್ಕ ಸುನೀಲ. ಅವಳು ಅವನ ಕೂದಲಲ್ಲಿ ಕೈ ತೂರಿಸಿ ಸವರಿದಳು. ಸುನೀಲ ತಾನು ವಿದೇಶಕ್ಕೆ ಬಂದದ್ದೇ ಇವಳನ್ನು ಭೇಟಿಯಾಗಲಿಕ್ಕೆ ಎಂದು ಭ್ರಮಿಸಿದ. ಹೆಸರನ್ನೇ ಬೇಡದ ಈ ಸಂಬಂಧವೊಂದೇ ಸತ್ಯವೆಂದು ತೋರಿತವನಿಗೆ. ಮಾತಿಲ್ಲದೆ, ಕತೆಯಿಲ್ಲದೆ ಮೂರು ಗಂಟೆ ಕಳೆದ ಅಂತರ ಮನೆಗೆ ಮರಳಿದ ಸುನೀಲ. ರಾಹುಲನಲ್ಲಿ ಹೇಳುವ ಧೈರ್ಯವಾಗಲಿಲ್ಲ!
ಮತ್ತೆ ಎರಡು ವೀಕೆಂಡ್ ಗಳಲ್ಲಿ ಅವಳನ್ನೇ ಹುಡುಕಿಕೊಂಡು ಹೋಗಿ ಗಂಟೆಗಳ ಕಾಲ ಮಾತಿಲ್ಲದೆ ಕಳೆದು ಬಂದ ಸುನೀಲ. ತಾನಲ್ಲಿ ಹೋಗುವುದು ಅವಳನ್ನು ಕಾಣಲಿಕ್ಕೋ ಅಥವಾ ತನ್ನನ್ನೇ ನೋಡಿಕೊಳ್ಳಲಿಕ್ಕೋ ಎಂದು ಪ್ರಶ್ನಿಸಿಕೊಂಡ. ಶುಭ್ರ ಕೆರೆಯ ನೀರಿನಲ್ಲಿ ಸೂರ್ಯನ ಬಿಂಬ ನೋಡುತ್ತ ಕಳೆದ ಅನುಭವ. ತನಗೇನಾಗುತ್ತಿದೆ ಎಂದು ಒದ್ದಾಡಿದ. ಮೊದಲ ಬಾರಿಗೆ ತನಗೆ ನಿಜಕ್ಕೂ ಪ್ರೇಮವಾಗಿದೆ ಎಂದುಕೊಂಡ. ಸಂಜೆ ಬಾಲ್ಕನಿಯಲ್ಲಿ ಕುಳಿತು ನಕ್ಷತ್ರಗಳನ್ನೇ ದಿಟ್ಟಿಸುತ್ತಾ ಆ ವಾರ ಕಳೆದ.
ಕೊನೆಗೆ ಸುನೀಲ ಭಾರತಕ್ಕೆ ಮರಳುವ ದಿನವೂ ಬಂದಿತು. ಹಿಂದಿನ ದಿವಸ ಅವಳಲ್ಲಿಗೆ ಮತ್ತೆ ಹೋದ ಸುನೀಲ. "ಐ ಯಾಮ್ ಲೀವಿಂಗ್ ಟು ಮೈ ಕಂಟ್ರಿ ಟುಮಾರೋ.", ಎಂದ. ಆಕೆಗೆ ಅರ್ಥವಾದಂತೆನಿಸಿತು. ಸುಮ್ಮನೆ ಅವನ ಮುಖವನ್ನೇ ದಿಟ್ಟಿಸಿದಳು. ಇವನು ಅವಳನ್ನು ಅಪ್ಪಿಕೊಂಡು ಮಲಗಿದ. ತಾನು ಗಂಧರ್ವ, ಆಕೆ ಗಂಧರ್ವ ಕನ್ಯೆ ಎಂದು ಭ್ರಮಿಸಿದ. ಕಾಲ, ದೇಶಗಳ ಹಂಗಿಲ್ಲದೆ ಹೋಗಿದ್ದರೆ ಎಂದುಕೊಂಡ. ಗಂಟೆಗಟ್ಟಲೆ ಕಳೆದ ನಂತರ ಹೊರಟಾಗ, ಅವಳು ಮೆಲ್ಲನೆ ಅವನ ಬಳಿ ಬಂದು, "ಐ ಲವ್ ಯೂ.", ಎಂದು ಕಿವಿಯಲ್ಲುಸುರಿದಳು. ಸುನೀಲನ ಕಂಗಳು ಹನಿಗೂಡಿದವು. ಕೊನೆಯ ಬಾರಿಗೆ ಎಂಬಂತೆ ಅವಳನ್ನು ಕಣ್ಣಲಿ ತುಂಬಿಸಿಕೊಂಡು ಹೊಸತೇನೋ ಸಂಪಾದಿಸಿದವನಂತೆ ಎದೆ ಹಿಗ್ಗಿಸಿಕೊಂಡು ಅಲ್ಲಿಂದ ಹೊರ ಬಿದ್ದ. ಕೊನೆಗೂ, ಮಾತು ಕತೆಗಳ ಹಂಗಿಲ್ಲದೆ, ತನ್ನನ್ನು ತಾನು ಮಾರಿಕೊಳ್ಳದೆ ಪ್ರೇಮವೊಂದನ್ನು ಸಂಪಾದಿಸಿದ ಸುನೀಲ ಅದರಿಂದಲೂ ಹೊರ ನಡೆದಿದ್ದ, ಮತ್ತೊಂದು ಪುಸ್ತಕ ಓದಿ ಮುಗಿಸಿದವನಂತೆ, ಈ ಬಾರಿ ಪುಸ್ತಕವನ್ನು ಅಭಿಮಾನದಿಂದ ಎದೆಗೊತ್ತಿಕೊಂಡು.

Lo Lo , I am going to sue u!!!
ReplyDeletevery true , how a man goes in search of things and how he finds ultimately that the journey was the reward!
Thanks Sunil...! Thanks for reading..
ReplyDeletenijakku kiran nimma e putta story egina arthavillada badukige idida kannadiyanthide. very meaning ful story.. keep writing
ReplyDeleteThanks Madhushree avre!
ReplyDeleteSuper ok
ReplyDeleteOK Good and Coll
ReplyDeleteThanks Suresh. Thanks Noorulla. Thanks a lot for reading!
ReplyDeletenice
ReplyDeleteThanks :)
DeleteGood one Kiran.. Paapa Sunil :)
ReplyDeleteThanks Ashwini :-) Sunil wanted to sue me :-D
DeleteThis comment has been removed by the author.
ReplyDeleteಕಿರಣ್ ತುಂಬ ಅದ್ಭುತವಾಗಿದೆ ಈ ಲೇಖನ... ನಾನು ಮೊದಲು ಸಾಲು ಓದಲು ಶುರು ಮಾಡಿದವನು ಯಾವಾಗ ಮುಗಿದು ಹೋಯಿತು ಎಂದು ತಿಳಿಯಲೇ ಇಲ್ಲ... ನೀವು ಖಂಡಿತ ಕಾದಂಬರಿಗಳನ್ನು ಬರೆಯಲು ಶುರು ಮಾಡಬಹದು..
ReplyDeleteodiddakke, hagu ishtu oLLe feedback ge dhanyavadagaLu!
Deleteಕಿರಣ್ ತುಂಬ ಅದ್ಭುತವಾಗಿದೆ ಈ ಲೇಖನ... ನಾನು ಮೊದಲು ಸಾಲು ಓದಲು ಶುರು ಮಾಡಿದವನು ಯಾವಾಗ ಮುಗಿದು ಹೋಯಿತು ಎಂದು ತಿಳಿಯಲೇ ಇಲ್ಲ... ನೀವು ಖಂಡಿತ ಕಾದಂಬರಿಗಳನ್ನು ಬರೆಯಲು ಶುರು ಮಾಡಬಹದು..
ReplyDelete