Jun 1, 2014

FaceBook Ramblings - Jun 2014

Jun 22, 2014:

ಟಿಪಿಕಲ್ ಕೈಲಾಸ್ : ಸಹಜ ಹಾಸ್ಯದ ಉತ್ತಮ ಚಿತ್ರ. ಸೃಜನ್ ಲೋಕೇಶ್ ನಗಿಸುವುದು ತುಂಬ ಸುಲಭವೇನೋ ಎಂದೆನಿಸುವಂತೆ ನಟಿಸಿದ್ದಾರೆ. ಹಾಸ್ಯಕ್ಕಾಗಿ ಹಾಸ್ಯ ಸೃಷ್ಟಿಸದೆ, ಒಂದು ಸರಳ ಕಥೆ ಹೇಳುತ್ತ, ಆ ಕಥೆಯಲ್ಲಿ ಹಾಸ್ಯವನ್ನು ಬೆರೆಸಿರುವ ನಿರ್ದೇಶಕರ ಶೈಲಿ ಇಷ್ಟವಾಗುತ್ತದೆ.
Watch it for a good laugh.

Jun 19, 2014:

ದೇವರು ಇದ್ದಾನೆಯೇ ಇಲ್ಲವೇ ಎಂದು ಕೇಳಿದರೆ ಇದ್ದಾನೆ ಅಥವ ಇಲ್ಲ ಎಂದು ಖಚಿತವಾಗಿ ಉತ್ತರಿಸುವವರೆ ಹೆಚ್ಚು. ಈ ಪ್ರಶ್ನೆಗೆ 'ಗೊತ್ತಿಲ್ಲ ', ಎಂದು ಮುಗ್ಧವಾಗಿ ಉತ್ತರಿಸುವುದು ಸಾಧ್ಯವಿಲ್ಲವೆ? 'ನಾನು' ಎಂದರೆ ಏನು ಎಂಬುದನ್ನು ಅರಿಯುವುದೇ ಅಸಾಧ್ಯವಾಗಿರುವಾಗ, ದೇವರು ಇಲ್ಲ ಎಂದು ಸಾಧಿಸಿ ತೋರಿಸಲು ಸಾಧ್ಯವೆ? ಅಥವ ದೇವರು ಇದ್ದಾನೆ ಎನ್ನುವುದಾದಲ್ಲಿ ಅವನನ್ನು ಪಡೆಯಲು ಸಾಧ್ಯವೆ!? ಮನುಷ್ಯತ್ವವನ್ನು ಉಳಿಸಿಕೊಳ್ಳಲೇ ಹೆಣಗಬೇಕಾಗಿ ಬಂದಿರುವಾಗ, ದೈವತ್ವದ ಅನ್ವೇಷಣೆ ಅವಶ್ಯವೆ?

Jun 3, 2014:

ಬದುಕು ಮುಖ್ಯವೆ, ಬದುಕಿನ ಕುರಿತಾದ ಪ್ರಶ್ನೆಗಳು ಮುಖ್ಯವೆ? ಬದುಕಿನ ಹಿಂದೆ ಹೋದವರು ಪ್ರಶ್ನೆಗಳನ್ನು ಮರೆಯುತ್ತಾರೆ, ಪ್ರಶ್ನೆಗಳ ಹಿಂದೆ ಹೋಗುವವರು ಬದುಕುವುದನ್ನು ಮರೆಯುತ್ತಾರೆ. ಎರಡನ್ನೂ ಸಮನಾಗಿ ತೂಗಿಸಿಕೊಂಡು ಹೋಗುತ್ತೇನೆ ಎನ್ನುವವರು ಎರಡಕ್ಕೂ ನ್ಯಾಯ ಒದಗಿಸುವುದಿಲ್ಲ.
ಬದುಕು ಮುಖ್ಯವೆ, ಬದುಕಿನ ಕುರಿತಾದ ಪ್ರಶ್ನೆಗಳು ಮುಖ್ಯವೆ?



No comments:

Post a Comment