Dec 1, 2014

Facebook Ramblings - Dec 2014

Dec 28, 2014:

The year looked normal and uninteresting; but when Facebook told me how great it was, WOW!
feeling blah.

 Dec 21, 2014:


ನಿನ್ನೆಯಿಂದ ಪೀಕೆ ಸಿನಿಮಾದ ಬಗ್ಗೆ ಫೇಸ್ಬುಕ್ಕಿನಲ್ಲಿ ಕೇಳಿ ಬರುತ್ತಿರುವ ವಿವಿಧ ತಪ್ಪು ಅಭಿಪ್ರಾಯಗಳು :
೧. ಇದು ಹಿಂದೂ ಧರ್ಮ ವಿರೋಧಿ ಸಿನಿಮಾ: ಪೀಕೆ ಮನರಂಜನೆಗೋಸ್ಕರ ಮಾಡಿರುವ ಸಿನಿಮಾ. ಮನರಂಜನೆ ನೀಡುತ್ತಲೇ ಮನುಷ್ಯ ಕಟ್ಟಿರುವ ದೇವರ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತದೆ. ಆ ಪ್ರಶ್ನೆಗಳು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತವೆ. ಸಿನಿಮಾವನ್ನು ವಿಮರ್ಶೆ ಮಾಡುವ ಬದಲು ಅದರ ನಾಯಕನಟನ ಧರ್ಮವನ್ನು ವಿಮರ್ಶೆ ಮಾಡಹೊರಟರೆ ಇಂಥ ಅಭಿಪ್ರಾಯ ಬರುತ್ತದೆ.
೨. ಪೀಕೆಯಲ್ಲಿ ಹೊಸತೇನೂ ಇಲ್ಲ. ಇದೆಲ್ಲ ನನಗೆ ಮೊದಲೇ ಗೊತ್ತಿತ್ತು: ಒಂದಿಷ್ಟು ಪುಸ್ತಕಗಳನ್ನು ಗಂಭೀರವಾಗಿ ಓದಿದವರಿಗೆ ಸಾಮಾನ್ಯರಿಗೆ ...ತಿಳಿದಿರದ ಎಷ್ಟೋ ವಿಷಯಗಳು ತಿಳಿದಿರುತ್ತದೆ. ಆದರೆ ಆ ಬುದ್ಧಿವಂತಿಕೆಯ ಅಹಂ ಇಟ್ಟುಕೊಂಡು ನೋಡಿದರೆ ಯಾವ ವಿಷಯವೂ ಹೊಸದಾಗಿ ಕಾಣುವುದಿಲ್ಲ. ಎಲ್ಲ ಸಿನಿಮಾಗಳೂ ನಮ್ಮ ಬುದ್ಧಿವಂತಿಕೆಗೆ ಸವಾಲಾಗಿಯೇ ಇರಬೇಕು ಎಂದೇನಿಲ್ಲ. ಇದುವರೆಗೆ ಕೆಲವು ವಿಚಾರವಾದಿಗಳ ಮಾತುಗಳಲ್ಲಿ, ಪುಸ್ತಕಗಳಲ್ಲಿ,ಹಾಗೂ ಕೆಲವರ ಮನಗಳಲ್ಲಿ ಕುಳಿತಿದ್ದ ವಿಚಾರಗಳು ಬಾಲಿವುಡ್ ನಂಥ ಪ್ರಬಲ ಮಾಧ್ಯಮದ ಮೂಲಕ ಮತ್ತಷ್ಟು ಜನರನ್ನು ತಲುಪುವುದಾದರೆ ತಪ್ಪೇನು? 'ಪ್ರೇಮ ಅಮರ' ಎನ್ನುತ್ತ ಒಂದು ಗಂಡು ಮತ್ತು ಹೆಣ್ಣಿನ ನಡುವಿನ ಪ್ರೇಮವನ್ನು ಏನೋ ಹೊಸ ವಿಷಯವೆಂಬಂತೆ ಮತ್ತೆ ಮತ್ತೆ ತೋರಿಸುವ ಸಿನಿಮಾಗಳ ಮಧ್ಯೆ ಇಂಥದೊಂದು ಹೊಸ ಪ್ರಯತ್ನ ನಡೆದಾಗ ಪ್ರೋತ್ಸಾಹಿಸಬೇಕೆ ಹೊರತು 'ನನಗಿದೆಲ್ಲ ಇಪ್ಪತ್ತು ವರ್ಷಗಳ ಹಿಂದೆಯೇ ಗೊತ್ತಿತ್ತು' ಎಂಬ ಗರ್ವ ತಪ್ಪು.
೩. ಅಮೀರ್ ಖಾನ್ ಹಿಂದುತ್ವ ವಿರೋಧಿ, ಅವನ ಸಿನಿಮಾ ನೋಡುವ ಹಿಂದೂಗಳು ನಿರಭಿಮಾನಿಗಳು: ಸಿನಿಮಾವನ್ನು ಸಿನಿಮಾ ಆಗಿ ನೋಡದೆ hidden agenda ಗಳನ್ನು ಹುಡುಕುವವರಿಗೆ ಹೀಗೆ ಅನ್ನಿಸುತ್ತದೆ. ಪೀಕೆ ನೋಡಿದ ಹಿಂದೂಗಳು ಮರುಕ್ಷಣವೇ ಹಿಂದೂ ಧರ್ಮ ಸರಿಯಿಲ್ಲ, ನಾವೆಲ್ಲ ಧರ್ಮ ಬದಲಿಸೋಣ ಎನ್ನುತ್ತಾರೆಯೇ?

Dec 20, 2014:

PK : An awesome first half makes you laugh about God, religion, and social conditioning. That makes it a treat to watch. The movie gives in to usual Bollywood formula in the second half, but that can be forgiven.
Rajkumar Hirani has used all his usual tricks, but has delivered a movie that is entertaining and thought provoking.
Watch it for the terrific first half. That alone makes it a great movie.

Dec 1, 2014:

ಮಾತು ಆಡಿದರೆ ಹೋಯಿತು, ಟಚ್ ಸ್ಕ್ರೀನ್ ಒಡೆದರೆ ಹೋಯಿತು. :-D

No comments:

Post a Comment