ಬಣ್ಣ ಬಣ್ಣದನಿನ್ನ ಮುಖವಾಡ
ಕಳಚಿ ಬಿಡು,
ಎಸೆದು ಬಿಡು,
ಬಣ್ಣವಷ್ಟೆ ಕಾಣುತ್ತಿದೆ ನನಗೆ,
ನಿನ್ನ ಕಂಗಳು ಕಾಣುತ್ತಿಲ್ಲ,
ಕಂಗಳು ಕಾಣದಿದ್ದರೆ
ನನಗೆ ಮಾತು ಹೊರಡುವುದಿಲ್ಲ!
ನೀನು ಎಸೆದ ಬಳಿಕ
ನನ್ನ ಕಣ್ಣನ್ನೊಮ್ಮೆ ನೋಡು,
ಕಾಣದಿದ್ದರೆ ಹೇಳು,
ನನ್ನ ಬಣ್ಣ ಕಳೆಯಲು
ಸ್ವಲ್ಪ ಸಹಾಯ ಮಾಡು,
ಮತ್ತೆ
ಮಾತಾಡೋಣ
ಜೊತೆಗೆ ಕುಳಿತು ನಾವು,
ನಾನು ನಾನಾಗಿ,
ನೀನು ನೀನಾಗಿ!
No comments:
Post a Comment