Dec 25, 2008

ಕೊನೆಗುಳಿದದ್ದು ...

ಕೊನೆಗೊಮ್ಮೆ
ಎಲ್ಲ ಮಣ್ಣಾಯಿತು,
ಮಹಾ ಸಾಮ್ರಾಜ್ಯ ನೆಲಕ್ಕುರುಳಿತು,
ಕೋಟೆ ಕೊತ್ತಲ ನೆಲ ಸಮ.

ವಿಶ್ವ ಸುಂದರಿಗೂ
ಮುಪ್ಪಡರಿತು,
ಚಿರ ಸೌಂದರ್ಯದ
ಕನಸು ಭಗ್ನ.

ಸರ್ವಾಧಿಕಾರ
ಮಣ್ಣು ಮುಕ್ಕಿತು,
ಭವ್ಯ ಕಟ್ಟಡ
ಉರಿದು ಭಸ್ಮ.

ಆಗಲೂ ಉಳಿದದ್ದು,
ಅಳಿಯದೆ ನಿಂತದ್ದು,
ನಾನೆಂಬ ಮಮಕಾರ,
ಮನುಕುಲದ ಅಹಂಕಾರ!

3 comments: