Apr 24, 2009

ಮಳೆ ಬಂದಾಗ


ಸಂಜೆ ಏಳರ ಹೊತ್ತಿಗೆ ಮಳೆ ಜಡಿಯತೊಡಗಿತ್ತು.
ನೆನೆಯುವ ಮುನ್ನ ಮನೆ ಸೇರುವ ಎಂದು ಸೈಕಲ್ಲು ಸವಾರರು ಬಿರಬಿರನೆ ಸೈಕಲ್ಲು ತುಳಿದರು.
ಪಾನಿ ಪೂರಿ ತಿನ್ನಲು ರಸ್ತೆ ಬದಿಯಲ್ಲಿ ನಿಂತವರು ಬೇಗ ಬೇಗನೆ ತಿಂದರು.
ಒಬ್ಬ ಕಾರಿನ ಬಾಗಿಲು ತೆರೆದು ಹೊರಗಿದ್ದ ಮಗಳಿಗೆ, "ಬೇಗ ಬಾ", ಎಂದು ಗದರಿಸಿದ.
ವಾಯು ವಿಹಾರಕ್ಕೆ ಬಂದಿದ್ದ ಅಜ್ಜ ಬೇಗ ಬೇಗನೆ ಮನೆಯತ್ತ ಹೆಜ್ಜೆ ಹಾಕಿದ.

ಬಿಸಿಲಲ್ಲಿ ಬೆಂದಿದ್ದ ನೆಲ ಮಳೆಯಲ್ಲಿ ನೆನೆದು ನಿಟ್ಟುಸಿರು ಬಿಟ್ಟಿತು.
ಒಂದು ನಾಯಿ ಮಳೆಯಿಂದ ರಕ್ಷಣೆ ಹುಡುಕುತ್ತ ಮಳೆಯಲ್ಲಿ ಓಡಿತು.
ಆಫೀಸಿನಿಂದ ವಾಪಾಸು ಬರುತ್ತಿದ್ದ ಕೆಲವರು ತಲೆಗೆ ಕರವಸ್ತ್ರ ಕಟ್ಟಿಕೊಂಡು ಓಡಿದರು.
ಪಾರ್ಕಿನಲ್ಲಿದ್ದ ಪ್ರೇಮಿಗಳು ಗುಡ್ ಬೈ ಹೇಳಿ ಮನೆಯ ದಾರಿ ಹಿಡಿದರು. ರಸ್ತೆ ಬದಿಯ ತಳ್ಳು ಗಾಡಿಯವನು ವ್ಯಾಪಾರ ಕೆಟ್ಟಿತೆಂದು ಗೊಣಗುತ್ತ ಗಾಡಿ ತಳ್ಳಿದ. ಕಾಸು ಕೇಳದೆ ಸುರಿಯುವ ಮಳೆಯಲ್ಲಿ ೧೩ ರೂಪಾಯಿಯ ಬಿಸ್ಲೇರಿ ಬಾಟಲಿ ಹಿಡಿದು ನಾನು ಮನೆಯತ್ತ ನಡೆದೆ...

No comments:

Post a Comment