ಇದು ಹಾಸ್ಯ ಚಿತ್ರವಲ್ಲ, "ವ್ಯಂಗ್ಯ" ಚಿತ್ರ ಅನ್ನಬೇಕು. ಮಾಮೂಲಿ ಬೇಜಾರುಗಳಲ್ಲಿ ಕಳೆದು ಹೋದ ಜೀವಗಳಿಗೆ ವ್ಯಂಗ್ಯದ ಚುಚ್ಚು ಮದ್ದು ಇದು. ಪ್ರತಿ ದೃಶ್ಯದಲ್ಲೂ ತಿವಿದು ಎಬ್ಬಿಸುವಂಥ ಸಂಭಾಷಣೆ ಉಪಯೋಗಿಸಿದ್ದಾರೆ ಯೋಗರಾಜ ಭಟ್.
ಭಾರಿ ತತ್ವ ಅಥವಾ ನೀತಿಗಳ ಬೆಂಬಲವಿಲ್ಲದ ಒಂದು ಶುದ್ಧ ಮನೋರಂಜನೀಯ ಸಿನಿಮ ಇದು. ಜೀವನದ ಬಗ್ಗೆ ತೀವ್ರವಾಗಿ ಯೋಚಿಸುತ್ತಲೇ "ಲೈಫು ಇಷ್ಟೇನೆ" ಎನ್ನುವ ಉಡಾಫೆಯನ್ನೂ ನಾಯಕನ ಮೂಲಕ ತೋರಿಸಲಾಗಿದೆ. ಪ್ರತಿ ಬಾರಿ "ಲೈಫು ಇಷ್ಟೇನೆ" ಎನ್ನುವಾಗಲೂ ವೀಕ್ಷಕ "ಇದರಾಚೆಗೂ ಏನೋ ಇದೆ" ಎಂದು ಯೋಚಿಸುವಂತೆ ಮಾಡುವುದೇ ನಿರ್ದೇಶಕನ ಉದ್ದೇಶ ಅನ್ನಿಸುತ್ತದೆ.
ಹಾಡುಗಳ ಮೂಲಕ ನಿರ್ದೇಶಕ ವೀಕ್ಷಕನೊಂದಿಗೆ ನೇರ ಸಂಭಾಷಣೆಗೆ ಇಳಿದಂತೆ ಕಾಣುತ್ತಿದೆ. "ಪಂಚರಂಗಿ ಹಾಡುಗಳು" ಎಂಬ ಹಾಡಿನಲ್ಲಿ ನಾಯಕನಿಗೆ ಹಿನ್ನೆಲೆ ಧ್ವನಿ ನೀಡುವ ಯೋಗರಾಜ್ ಭಟ್ ನಾಯಕನ ಮೂಲಕ ತೋರಿಸಲು ಹೊರಟಿದ್ದು ತಮ್ಮ ಜೀವನ ದೃಷ್ಟಿಯನ್ನು ಎಂದು ನನ್ನ ಭಾವನೆ. ಈ ಹಾಡಿನಲ್ಲಿ ಧ್ವನಿಯಲ್ಲಿರುವ ವ್ಯಂಗ್ಯದಿಂದಾಗಿ ಯೋಗರಾಜ್ ಭಟ್ ಗಮನ ಸೆಳೆಯುತ್ತಾರೆ.
ಪಾತ್ರ ಪೋಷಣೆಗೆ ಸಾಕಷ್ಟು ಗಮನ ಹರಿಸಲಾಗಿದೆ. ಕಥೆಯಲ್ಲಿ ಸಂಕೀರ್ಣ ಅಂಶಗಳೇನು ಇಲ್ಲದೆಯೂ ವೀಕ್ಷಕನನ್ನು ತೊಡಗಿಸಿಕೊಳ್ಳುವ ಸತ್ವ ಉಳ್ಳ ಸಂಭಾಷಣೆ ಇದೆ. ನಟರೆಲ್ಲರೂ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಖಂಡಿತವಾಗಿಯೂ ಇದು ಒಂದು ಉತ್ತಮ ಚಿತ್ರ; ವೀಕ್ಷಕನನ್ನು ಯೋಚಿಸಲು ಹಚ್ಚಿಸುವಲ್ಲಿ ಯಶಸ್ವಿಯಾಗುವ ಚಿತ್ರ.
ee sinimaa da vimarshe ge hudukuthiddaga idu sikkithu : http://sampada.net/article/27789#comment-form
ReplyDeletePerfect vimarshe annisithu.
Yograj Bhat is best:)
ReplyDeleteI agree :)
ReplyDelete