Nov 1, 2014

FaceBook Ramblings - Nov 2014

Nov 20, 2014:

ಎಫ್.ಎಮ್. ನಲ್ಲಿ ಹಾಡು ಕೇಳುತ್ತಾ ಗಾಡಿ ಓಡಿಸುತ್ತಿದ್ದ ಅವನ ಟೈರ್ ಒಮ್ಮೆ ಜೋರಾಗಿ 'ಢಮ್' ಎಂದು ಸದ್ದು ಹೊರಡಿಸಿ ಗಾಳಿ ಕಳೆದುಕೊಂಡಿತು. ಇನ್ನೇನು ಹಿಡಿತ ತಪ್ಪಿ ಬೀಳಲಿದ್ದವನು ಸಂಭಾಳಿಸಿಕೊಂಡು ಗಾಡಿಯನ್ನು ರಸ್ತೆಯ ಬದಿಗೆ ತರುವಲ್ಲಿ ಯಶಸ್ವಿಯಾದ. ಗಾಡಿಯನ್ನು ತಳ್ಳಿಕೊಂಡು ಹೊರಟ. ಬಿಸಿಲು ಜೋರಿತ್ತು. ಬೆವರಿಳಿಸಿಕೊಂಡು, ಏದುಸಿರು ಬಿಡುತ್ತಾ ಅಸಹಾಯಕ ಸಿಟ್ಟಿನಲ್ಲಿ ಪ್ರಪಂಚಕ್ಕೆಲ್ಲ ಬಯ್ಯುತ್ತಿದ್ದವನ ಕಣ್ಣಿಗೆ ಆ ಬೋರ್ಡು ಬಿದ್ದಾಗ ಅವನ ಬಾಯಲ್ಲಿ ಬಂದ ಹಾಡು - 'ಅರರರೇ ಪಂಚರ್ ಅಂಗ್ಡಿ!!!'. ಎಫ್.ಎಮ್. ನಲ್ಲಿ ಬರುತ್ತಿದ್ದ ಹಾಡು -'ಅರರರೇ ಪಂಚರಂಗಿ!'

Nov 18, 2014:

ಒಂದು ಮಕ್ಕಳ ಕಥೆ:
ಒಂದು ಊರಿನಲ್ಲಿ ಒಬ್ಬ ಸಜ್ಜನ ವ್ಯಾಪಾರಿಯಿದ್ದ. ಅವನು ದೈವಭಕ್ತ, ನ್ಯಾಯಕ್ಕೆ ಹೆದರುತ್ತಿದ್ದ. ಊರ ಜನರೂ ಕೂಡ ಇವನನ್ನು ಬಹಳ ಮೆಚ್ಚುತ್ತಿದ್ದರು.
ಅದೇ ಊರಿನಲ್ಲಿ ಒಬ್ಬ ದುಷ್ಟ ವ್ಯಾಪಾರಿಯಿದ್ದ. ಅವನು ದೇವರನ್ನು ನಂಬುತ್ತಿರಲಿಲ್ಲ. ಅವನು ಬಹಳ ಅನ್ಯಾಯ ಮಾಡುತ್ತಿದ್ದ.
...
ಕಾಲ ಕಳೆದಂತೆ ಸಜ್ಜನ ವ್ಯಾಪಾರಿಯ ವ್ಯವಹಾರ ಉನ್ನತಿ ಹೊಂದುತ್ತಾ ಹೋಯಿತು. ದುಷ್ಟ ವ್ಯಾಪಾರಿಯ ಮೋಸ, ವಂಚನೆ ಅವನನ್ನೇ ಬಲಿ ತೆಗೆದುಕೊಂಡಿತು.
ನೀತಿ: ನ್ಯಾಯಕ್ಕೇ ಜಯ.... ಹೀಗೆಲ್ಲಾ ಹೇಳ್ತಾ ಹೋದ್ರೆ ಇವತ್ತಿನ ಮಕ್ಕಳು ನಂಬೊಲ್ಲ ಬಿಡಿ. ದೊಡ್ಡವರಂತೂ ಪಕಪಕನೆ ನಗುವುದು ಖಂಡಿತ. ಹಾಗಿದ್ರೆ ನೀತಿ ಏನು? ಯಾವೋನಿಗೊತ್ತು!

Nov 17, 2014:

ಈ 'ಸೆಲ್ಫಿ' ಯುಗದಲ್ಲಿ 'ಸೆಲ್ಫ್ ಲೆಸ್' ಆಗಿರು ಅಂತ ಹೇಳೋದು ಹೇಗೆ?