ಈಗೀಗ ನನಗೆ ಅತ್ತಾಗ ಕಣ್ಣೀರು ಬರುವುದಿಲ್ಲ,
ಎಷ್ಟು ಅತ್ತರೂ ದುಃಖ ಇಳಿಯುತ್ತಿಲ್ಲ,
ದುಃಖ ಒತ್ತರಿಸಿ ಬಂದಾಗಲೂ ನಾನು ಬಿಕ್ಕಳಿಸುವುದಿಲ್ಲ!
ಈಗೀಗ ನನಗೆ ಮಾತಾಡಲು ದನಿಯೇ ಹೊರಡುತ್ತಿಲ್ಲ,
ಹೊರಟ ದನಿಗೆ ಉಸಿರು ಜೊತೆ ಕೊಡುತ್ತಿಲ್ಲ,
ಕೊರಳು ಹಿಂಡಿದವರು ಯಾರೆಂದು ನಾನು ಯೋಚಿಸುವುದಿಲ್ಲ!
ಈಗೀಗ ಸಂಜೆ ಹೊತ್ತು ತಂಗಾಳಿ ಬೀಸುತ್ತಿಲ್ಲ,
ಬಿಸಿಲ ಬೇಗೆ ಏಕೋ ಏನೋ ಇಳಿಯುತ್ತಿಲ್ಲ,
ಬೆಳದಿಂಗಳು ಮೂಡಬಹುದೆಂಬ ಆಸೆಯೇ ನನಗಿಲ್ಲ!
ಈಗೀಗ ಯಾವ ಕರೆಗಂಟೆಗೂ ನಾನು ಉತ್ತರಿಸುತ್ತಿಲ್ಲ,
ಎಷ್ಟು ತಟ್ಟಿದರೂ ಮುಚ್ಚಿದ ಬಾಗಿಲು ತೆರೆಯುವುದಿಲ್ಲ,
ಬಾಗಿಲು ತೆರೆದರೆ ಬೆಳಕು ಬರಬಹುದೆಂದು ನನಗನ್ನಿಸುವುದಿಲ್ಲ!
ಈಗೀಗ ನನ್ನ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕುತ್ತಿಲ್ಲ,
ಪ್ರಪಂಚದ ಹಾಳು ರಗಳೆ ನನರ್ಥವಾಗುವುದಿಲ್ಲ,
ಅರ್ಥಾನರ್ಥಗಳ ಸಂತೆಯಲ್ಲಿ ನನಗೆ ನಾನೇ ಕಾಣುತ್ತಿಲ್ಲ!
Subscribe to:
Post Comments (Atom)
ಪ್ಯಾಪಿಯ ಪತಂಗ | Pyapiya Patanga
ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...
-
ಸುನೀಲನಿಗೆ ಎರಡನೇ ಇಯತ್ತೆಯಿಂದಲೇ ವರ್ಷಕ್ಕೊಬ್ಬ ಹುಡುಗಿಯ ಮೇಲೆ ದೈವಿಕ ಪ್ರೇಮ ಹುಟ್ಟುತ್ತಲೇ ಇತ್ತು. ತರಗತಿಯಲ್ಲಿ ಇದ್ದುದರಲ್ಲಿ ಚೆಂದದ ಹುಡುಗಿಯರಲ್ಲಿ ವಿಪರೀತ ಪ್ರ...
-
It had been 3 days since Siddharth (Sid) joined his new job in an IT firm. He had joined on a Wednseday. The manager had then told, "We...
-
ತಾಳ್ಮೆ, ಶಾಂತಿ, ಪರಿಶ್ರಮ ಇತ್ಯಾದಿ... ************************** ತಾಳ್ಮೆ ತೀವ್ರ ನಿಗಾ ಘಟಕದಲ್ಲಿ ಕೇಳುವವರಿಲ್ಲದೆ ಬಡಕಲಾಗಿದ್ದ. ಯಾರೂ ಮಾತಾಡಿಸಲು ಬಂದಿರಲಿಲ...
No comments:
Post a Comment