ಭಾರಿ ಆಕಾಂಕ್ಷೆಗಳಿರದ ವಿಷಯಗಳನ್ನು ಇಷ್ಟ ಪಡತೊಡಗಿದ್ದೇನೆ. ದೊಡ್ಡ ಆಸೆಗಳಿರದ ಸಿನಿಮಾಗಳು , ಕೇವಲ ಮನರಂಜನೆಗಾಗಿ ಸಂಯೋಜಿಸಿದ ಹಾಡುಗಳು ಇತ್ಯಾದಿ . ಕೈಗೆಟುಕದ ವಿಷಯಗಳು ಎಟುಕಿವೆ ಎಂದು ತೋರಿಸಿಕೊಳ್ಳುವ ಆಕಾಂಕ್ಷೆಗಳಿರದ ಕಥೆ , ಹಾಡು , ಜಾಹಿರಾತು , ಮಾತು - ಇವೆಲ್ಲ ನಿಜಕ್ಕೂ ಎಷ್ಟು ಕಷ್ಟ ಎಂದು ಗೊತ್ತಾಗಿದೆ . ವ್ಯರ್ಥ ಶಬ್ದ , ಸಂಜ್ಞೆ , ಪ್ರತಿಮೆಗಳನ್ನು ಉಪಯೋಗಿಸಿ ಒಂದು ರೀತಿಯ home work ಇದ್ದರೆ ಮಾತ್ರ ಅರ್ಥವಾಗುವ ಕಥನ ಶೈಲಿ ಭಾರಿ ಸುಲಭ . ಇವು ಯಾವುದು ಇಲ್ಲದ , ಅನುಭವವನ್ನು ಅನುಭವಿಸಿದಂತೆ , ಕಲಿತ ಬುದ್ಧಿಯನ್ನುಪಯೋಗಿಸದೆ ಭಾಷೆಯಲ್ಲಿ ವಿವರಿಸುವುದು ಎಷ್ಟು ಕಷ್ಟ! 'ಮಾತಿನಲ್ಲಿ ಹೇಳಲಾರೆನು ' ಎನ್ನುವುದು ಸುಲಭ. ಆದರೆ ಮಾತಿನಲ್ಲಿ ಹೇಳಲಾಗದ್ದನ್ನು ನಾನು ನಿಜವಾಗಿಯೂ ಅನುಭವಿಸಿದ್ದೇನೆ ಎಂಬುದಕ್ಕೆ ಸಾಕ್ಷಿ ಏನು !
Subscribe to:
Post Comments (Atom)
ಪ್ಯಾಪಿಯ ಪತಂಗ | Pyapiya Patanga
ಮೊದಲ ಕತೆ ಬರೆದು ಒಂಬತ್ತು ವರ್ಷಗಳಾದವು. ಈ ಒಂಬತ್ತು ವರ್ಷಗಳಲ್ಲಿ ಬರೆದ ಕೆಲವು ಕತೆಗಳು ಈ ಕಥಾಸಂಕಲನದಲ್ಲಿವೆ. ನಾನು ಬೆಳೆದ, ಓಡಾಡಿದ, ನೋಡಿದ ಜಾಗಗಳಿಂದಲೇ ಕತೆಗಳನ್ನು ...
-
It had been 3 days since Siddharth (Sid) joined his new job in an IT firm. He had joined on a Wednseday. The manager had then told, "We...
-
ಮುಂಬಾಗಿಲಲ್ಲಿ 'ಸತೀಶ್ weds ಸುಷ್ಮಾ' ಎಂಬ ಶೃಂಗಾರಗೊಂಡ ಫಲಕವಿತ್ತು. ಚೌಲ್ಟ್ರಿ ಪ್ರವೇಶಿಸುವವರಿಗೆ ಪನ್ನೀರು ಚಿಮುಕಿಸಿ, ಪ್ಲಾಸ್ಟಿಲ್ ನಗೆ ನಕ್ಕು, 'ಬನ್...
ಓದಲು ಸಾದ್ಯ ಆಗುತ್ತಾ ಇಲ್ಲ. ಭಾಗಷ್ಯ, ಯುನಿಕೋಡ್ ನಲ್ಲಿ ಇಲ್ಲ ಅನ್ನಿಸುತ್ತೆ.
ReplyDeleteಯುನಿಕೋಡ್ ನಲ್ಲಿ ಮತ್ತೆ ಹಾಕಲು ಸಾದ್ಯವೇ?